Bigg boss : ರ್ಯಾಪ್‌ ಸ್ಟಾರ್‌ ಚಂದನ್‌ ಶೆಟ್ಟಿಗೆ ಅದ್ಯಾಕೆ ಇಷ್ಟು ಕಡಿಮೆ ಸಂಭಾವನೆ….?

ಈ ಬಾರಿಯ ಬಿಗ್‌ಬಾಸ್‌ ಅಷ್ಟೇನೂ ಯಶಸ್ವಿಯಾಗಿಲ್ಲ, ಸೆಲೆಬ್ರಿಟಿ ಹಾಗೂ ಕಾಮನ್ ಮ್ಯಾನ್‌ ಎಂಬ ಹೊಸ ಕಾನ್ಸೆಪ್ಟ್‌ ಇತ್ತಾದರೂ ಜನರಿಗೆ ಅಂತಹ ಮನರಂಜನೆ ಸಿಗುತ್ತಿಲ್ಲ ಎಂಬುದಂತೂ ಸತ್ಯ.

ಆದರೂ ಅದ್ಯಾಕೋ ಅನೇಕರು ಬಿಗ್‌ಬಾಸ್ ನೋಡುತ್ತಾರೆ. ಮನೆಯ ಪ್ರಮುಖ ಮನರಂಜನೆಯಾಗಿದ್ದ  ರ್ಯಾಪ್‌ ಸ್ಟಾರ್‌ ಚಂದನ್‌ ಶೆಟ್ಟಿ, ತಮ್ಮ ಹಾಡುಗಳ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸಖತ್ ಸೇಫ್ ಆಗಿ ಚಂದನ್ ಆಟವಾಡುತ್ತಿದ್ದಾರೆ. ಈ ಬಾರಿ ಅವರೇ ಗೆಲ್ಲುವುದು ಎಂದೂ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಗ್‌ಬಾಸ್‌ ಯಾರನ್ನು ಗೆಲ್ಲಿಸುತ್ತಾರೋ ನೋಡಬೇಕು.

ಏನೇ ಆಗಲಿ ಜನರನ್ನು ಎಂಟರ್‌ಟೈನ್‌ ಮಾಡುತ್ತಿರುವ ಚಂದನ್‌ ಶೆಟ್ಟಿ ಒಮ್ಮೆ ಲಿರಿಕ್ಸ್ ಬರೆದು ಹಾಡಿ ಯೂಟ್ಯೂಬ್‌ನಲ್ಲಿ ಬಿಟ್ಟರೆ ಸಾಕು ಲಕ್ಷಾಂತರ ರೂ ಗಳಿಸುತ್ತಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಇವರಿಗೆ ಕಡಿಮೆ ಸಂಭಾವನೆ ನೀಡುತ್ತಿದ್ದಾರಂತೆ. ವಾರಕ್ಕೆ ಕೇವಲ 60ರಿಂದ 70 ಸಾವಿರ ರೂ ಗಳಿಸುತ್ತಾರಂತೆ ಚಂದನ್‌. ನಟ-ನಟಿಯರಿಗೆಲ್ಲ ಲಕ್ಷಾಂತರ ರೂ ಸಂಭಾವನೆ ನೀಡುವ ಬಿಗ್‌ಬಾಸ್‌, ಅತಿ ಹೆಚ್ಚು ಮನರಂಜನೆ ನೀಡುವ ಚಂದನ್‌ಗೆ ಇಷ್ಚು ಕಡಿಮೆ ಸಂಭಾವನೆ ನೀಡುತ್ತಿರುವುದು ಸರಿಯಲ್ಲ ಎಂದು ಜನರ ಅಭಿಪ್ರಾಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com