ಕಾಂಗ್ರೆಸ್ ಪಕ್ಷ ತೊರೆಯುವುದರ ಬಗ್ಗೆ ಸ್ಪಷ್ಟನೆ ನೀಡಿದ ಅಂಬರೀಶ್‌…..ಹೇಳಿದ್ದೇನು…?

ಬೆಂಗಳೂರು: ಇತ್ತಿಚೆಗಷ್ಟೇ ಮಾಜಿ ಸಚಿವ ಅಂಬರೀಶ್‌ ಕಾಂಗ್ರೆಸ್‌ ಪಕ್ಷವನ್ನು ತೊರೆಯುತ್ತಾರೆ ಎಂಬ ಊಹಾಪೋಹಗಳ ಕುರಿತು ಸ್ವತಃ  ಅಂಬರೀಶ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿಗೆ ಅಂಬರೀಶ್ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್‌, ನಾನಿನ್ನೂ ಕಾಂಗ್ರೆಸ್‌ ತೊರೆಯುವ ಮನಸ್ಸು ಮಾಡಿಲ್ಲ. ನಾನು ದಿನನಿತ್ಯ ಬಿಜೆಪಿ, ಜೆಡಿಎಸ್‌ನವರೊಂದಿಗೆ ಮಾತನಾಡುತ್ತೇನೆ. ಅವರು ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ಹೋಗುತ್ತೇನೆ. ಆದರೆ ನಾನು ಕಾಂಗ್ರೆಸ್‌ ತೊರೆಯುತ್ತೇನೆ ಎಂಬ ಊಹೆ ನಿಜವಲ್ಲ ಎಂದಿದ್ದಾರೆ.

ಇದೇ ವೇಳೆ ಚುನಾವಣೆ ಕುರಿತು ಮಾತನಾಡಿದ ಅಂಬರೀಶ್ ರಮ್ಯಾ ಅವರು ಸ್ಪರ್ಧಿಸಿದರೆ ಅವರನ್ನು ಸ್ವಾಗತಿಸುತ್ತೇನೆ. ನನಗೆ ಟಿಕೆಟ್‌ ನೀಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಮಡದಿ ಅಥವಾ ಪುತ್ರನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com