51ನೇ ವಸಂತಕ್ಕೆ ಕಾಲಿಟ್ಟ ರವಿಶಂಕರ್ : ಆರ್ಮುಗಂಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಕಾಲೇಜ್ ಕುಮಾರ್
ಆರ್ಮುಗಂ ಖ್ಯಾತಿಯ ನಟ ರವಿಶಂಕರ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ನ್ಯಾಯಾಂಗ ಬಡಾವಣೆಯ ತಮಮ ನಿವಾಸದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಅಭಿಮಾನಿಗಳು ರವಿಶಂಕರ್ ನಿವಾಸಕ್ಕೆ ತೆರಳಿ ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ. ಇದೇ ವೇಳೆ ಮಾತನಾಡಿದ ರವಿಶಂಕರ್, ಅಭಿಮಾನಿಗಳ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಮದ್ಯಾಹ್ನ ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸುತ್ತೇನೆ ಎಂದಿದ್ದಾರೆ.
ಇನ್ನು ರವಿಶಂಕರ್ ಅವರ ಹುಟ್ಟುಹಬ್ಬಕ್ಕೆ ಕಾಲೇಜ್ ಕುಮಾರ್ ತಂಡ ವಿಶೇಷವಾದ ಟೀಸರನ್ನು ಬಿಡುಗಡೆ ಮಾಡಿ, ರವಿಶಂಕರ್ ಅವರಿಗೆ ಶುಭ ಕೋರಿದ್ದಾರೆ.
2011ರಲ್ಲಿ ಕೋಟೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರವಿಶಂಕರ್, ಕೆಂಪೇಗೌಡ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದ್ದರು. ಇದಾದ ಬಳಿಕ ಜಿಗರ್ಥಂಡಾ, ಅಂಜನೀಪುತ್ರ, ರಾಜರಥ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.