ದಿ. ರಾಜಶೇಖರ ಕೋಟಿ ಸ್ಮರಣಾರ್ಥ : ಡಿ. 7 ರಂದು ಮೈಸೂರಲ್ಲಿ ರಾಜ್ಯಮಟ್ಟದ ಕಾರ್ಯಗಾರ..

ಬೆಂಗಳೂರು :  ಆಂದೋಲನ ಪತ್ರಿಕೆ ಸಂಪಾದಕ ದಿವಂಗತ ರಾಜಶೇಖರ ಕೋಟಿ ಅವರ ನೆನಪಿನಾರ್ಥ ಡಿ. 7 ರಂದು ಮೈಸೂರಿನಲ್ಲಿ ರಾಜ್ಯಮಟ್ಟದ ಕಾರ್ಯಗಾರ ಆಯೋಜಿಸಲು ಕರ್ನಾಟಕ ಮಾಧ್ಯಮ ಅಕಾಡೆಮಿ ನಿರ್ದರಿಸಿದೆ.  ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಮಾಧ್ಯಮ ಅಕಾಡೆಮಿಯ ಸದಸ್ಯರಾಗಿದ್ದ ರಾಜಶೇಖರ ಕೋಟಿ ಅವರ ಸಲಹೆ ಮತ್ತು ಮಾರ್ಗದರ್ಶನ ಅಕಾಡೆಮಿಗೆ ಅತ್ಯಮೂಲ್ಯವಾಗಿತ್ತು. ಸಣ್ಣ ಪತ್ರಿಕೆಗಳನ್ನು ಆರಂಭಿಸಲು ಇರುವ ಸಮಸ್ಯೆಗಳು, ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬ ಬಗ್ಗೆ ಪುಸ್ತಕ ಬರೆಯುವಂತೆ ಕೋಟಿ ಅವರನ್ನು ಕೇಳಿಕೊಂಡಿದ್ದೆವು. ಅವರು ಸಹ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ಆದರೆ ಅವರ ಅಕಾಲಿಕ ಮರಣದಿಂದ ಅಕಾಡೆಮಿಗೆ ಈಗ ತುಂಬಲಾರದ ನಷ್ಟವಾಗಿದೆ ಎಂದು ಅಧ್ಯಕ್ಷ ಎಂ.ಸಿದ್ದರಾಜು ಸ್ಮರಿಸಿಕೊಂಡರು. ರಾಜಶೇಖರ ಕೋಟಿ ಸ್ಮರಣಾರ್ಥ ಸಭೆ ಆರಂಭಕ್ಕೂ ಮುನ್ನ ಸಂತಾಪ ಸೂಚಿಸಲಾಯಿತು.

ರಾಜಶೇಖರ ಕೋಟಿ ನೆನಪಿನಾರ್ಥ ಡಿ. 7 ರಂದು ` ಸಾಮಾಜಿಕ ಜಾಲತಾಣಗಳಿಂದ ಸಣ್ಣ ಪತ್ರಿಕೆಗಳ ಮೇಲಾಗುತ್ತಿರುವ ಪರಿಣಾಮಗಳು ಮತ್ತು ಸವಾಲು ‘ ಕುರಿತಂತೆ ಮೈಸೂರಿನಲ್ಲಿ ರಾಜ್ಯಮಟ್ಟದ ಒಂದು ದಿನದ ಕಾರ್ಯಗಾರ. ರಾಜ್ಯದ ವಿವಿಧ ಮಾಧ್ಯಮಗಳ ಹಿರಿಯ ಪತ್ರಕರ್ತರನ್ನು ಆಹ್ವಾನಿಸಲು ತೀರ್ಮಾನ.
2018 ರ ಜನವರಿಯಲ್ಲಿ ನಡೆಯುವ, 2017 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಗೆ `ರಾಜಶೇಖರ ಕೋಟಿ’ ವೇದಿಕೆ ಎಂದು ನಾಮಕರಣ.

Leave a Reply

Your email address will not be published.

Social Media Auto Publish Powered By : XYZScripts.com