ಐಟಿ ದಾಳಿ ಮಾಡಲು ಬಂದ್ರೆ ನಾನೇ ಹೂಗುಚ್ಛ ನೀಡಿ Welcome ಮಾಡುತ್ತೇನೆ : ಆಂಜನೇಯ

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿಕೆ ನೀಡಿದ್ದಾರೆ. ಐಟಿ ಅಧಿಕಾರಿಗಳ ನಮ್ಮ ಮನೆ ಮೇಲೆ  ದಾಳಿ ಮಾಡುವುದಾದರೆ ನಾನೇ ಹೂ ಗುಚ್ಚ ನೀಡಿ ವೆಲ್ ಕಂ ಮಾಡುತ್ತೇನೆ. ಮಾಧ್ಯಮಗಳ ಮೂಲಕ ಜೋರಾಗಿ ಹಾಕಿ ಆಂಜನೇಯ ಅವರ ಮನೆ ಐಟಿ ರೈಡ್ ಮಾಡಬೇಕಂತೆ ಅವರೇ ವಿನಂತಿ ಮಾಡಿಕೊಂಡಿದ್ದಾರೆಂದು ಹೇಳಿ. ನನ್ನ ಆಸ್ತಿ ಸಂಪತ್ತು ಎಷ್ಟಿದೆ ಎಂದು ದೇಶಕ್ಕೆ ಗೊತ್ತಾಗಲಿ.

ನನ್ನ ಆಸ್ತಿಯ ವಿವರ ಲೋಕಾಯುಕ್ತಕ್ಕೆ ನೀಡಿದ್ದೇನೆ, ಲೋಕಾಯುಕ್ತಕ್ಕೆ ನೀಡಿದ ದಿನದಿಂದ ಒಂದು ಇಂಚು ನನ್ನ ಆಸ್ತಿ ಜಾಸ್ತಿಯು ಆಗಿಲ್ಲ, ಕಡಿಮೆನೂ ಆಗಿಲ್ಲ. ಅಂಬೇಡ್ಕರ್ ಅವರನ್ನ ಸಂವಿಧಾನ ಶಿಲ್ಪಿ ಎಂದು ಗೌರವದಿಂದ ಕಾಣುತ್ತಿದ್ದೇವೆ. ವಿಶ್ವ ಸಂಸ್ಥೆ ಕಳೆದ ಬಾರಿ ಅಂಬೇಡ್ಕರ್ ಅವರ ೧೨೫ ಜನ್ಮದಿನದ ಅಂಗವಾಗಿ ನಾಲ್ಡೇಡ್ಜ್ ಡೇ ಆಚರಿಸಿ  ಗೌರವ ಸಮರ್ಪಿಸಿದೆ.

ಶತಶತಮಾನಗಳಿಂದ ತುಳಿತಕ್ಕೆ ಒಳಗಾದ ಸಮುದಾಯದಿಂದ ಬಂದ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನ ಮುಂದುವರೆದವರು ಅದನ್ನ  ಗೌರವಿಸಬೇಕು, ಪ್ರೀತಿಸಿ ಹೃದಯ ಶ್ರೀಮಂತಿಕೆ ಪ್ರದರ್ಶಿಸಬೇಕು.

Leave a Reply

Your email address will not be published.

Social Media Auto Publish Powered By : XYZScripts.com