Gujarat Poll : ಕೆಸರಲ್ಲೇ ಅರಳಲಿದೆ ಕಮಲ: ಕಛ್’ನಲ್ಲಿ ಗುಡಗಿದ PM ನರೇಂದ್ರ ಮೋದಿ…

ಕಛ್ : ಕಾಂಗ್ರೆಸ್ ನವರು ಕೆಸೆರೆರೆಚಾಟ ನಡೆಸುತ್ತಿದ್ದಾರೆ ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಏಕೆಂದರೆ ಕಮಲ ಅರಳುವುದು ಕೆಸರಿನಲ್ಲೇ ಎಂದು ಪ್ರಧಾನಿ ನರೇಂದ್ರ ಮೋದಿ ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ. ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸಿದರು…

ಗುಜರಾತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದೀರಿ, ಇದೇ ಕಾರಣದಿಂದ ಗುಜರಾತ್ ಹಿಂದುಳಿಯುವಂತಾಗಿತ್ತು, ಇದಕ್ಕಾಗಿ ನಿಮ್ಮನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೋಟು ನಿಷೇಧದಿಂದ ಕಾಂಗ್ರೆಸ್ ನವರಿಗೆ ಅಸಮಾಧಾನವಾಗಿದೆ. ಆದ್ದರಿಂದಲೇ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ನಾನು ಸರ್ದಾರ್ ಪಟೇಲರು ಜನಿಸಿದ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇನೆ, ಬಡವರಿಗೆ ಸೇರಬೇಕಾದ್ದು ಸೇರುವಂತೆ ಮಾಡಿಯೇ ಸಿದ್ಧ, ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ನವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ ಮೋದಿ.

Leave a Reply

Your email address will not be published.

Social Media Auto Publish Powered By : XYZScripts.com