ಸ್ನೇಹಿತನೊಂದಿಗೆ ಬೈಕಿನಲ್ಲಿ ಸುತ್ತಾಡಿದ ತಂಗಿ : ಕೋಪಗೊಂಡ ಟೆಕ್ಕಿ ಅಣ್ಣ ಮಾಡಿದ್ದೇನು..?

ಬೆಂಗಳೂರಿನಲ್ಲಿ ಟೆಕ್ಕಿ ಅಣ್ಣನಿಂದಲೇ ತಂಗಿಯ ಮೇಲೆ ಅಮಾನುಷ ಕೃತ್ಯ ನಡೆದಿದೆ. ಮಾತು ಕೇಳದ ತಂಗಿಯ ತಲೆ ಬೋಳಿಸಿ ಅಣ್ಣ ವಿಕೃತಿ ಮೆರೆದಿದ್ದಾನೆ. ತಮಿಳುನಾಡು ಮೂಲದ ಟೆಕ್ಕಿ ನಿಖಿಲ್ ಮಹಾಲಿಂಗಂನಿಂದ ಕೃತ್ಯ ನಡೆದಿದೆ. ನಿಖಿಲ್ ನಗರದ ಪ್ರತಿಷ್ಟಿತ ಕಂಪೆನಿಯಲ್ಲಿ ಸಾಫ್ಟವೇರ್ ಉದ್ಯೋಗಿಯಾಗಿದ್ದಾನೆ. ಸಹೋದರ ವಾಸವಿದ್ದ ಮನೆ ಬಳಿಯೇ ಪಿ ಜಿ ಯಲ್ಲಿ ವಾಸವಿದ್ದಳು. ನಗರದ ಪ್ರತಿಷ್ಟಿತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

ಕಾಲೇಜಿನಲ್ಲಿ ಪರಿಚಯವಿದ್ದ ಸ್ನೇಹಿತನ ಜೊತೆಗೆ ಓಡಾಡುತ್ತಿದ್ದಳು.  ನಿಖಿಲ್ ಸ್ನೇಹಿತನ ಸಹವಾಸ ಮಾಡದಂತೆ ಹಲವು ಬಾರಿ ವಾರ್ನಿಂಗ್ ನೀಡಿದ್ದ. ತಂಗಿ ಸ್ನೇಹಿತನ ಜೊತೆ ಹೋಗಿರುವ ವಿಷಯ ತಿಳಿದು ಕೋಪಗೊಂಡಿದ್ದ. ಬಳಿಕ ಮನೆಗೆ ಕರೆದೊಯ್ದು ಅವಾಚ್ಯ ಶಬ್ದಗಳಂದ ನಿಂದಿಸಿ, ಸ್ಕಿಪ್ಪಿಂಗ್ ಹಗ್ಗದಿಂದ ಥಳಿಸಿದ್ದಾನೆ.

ನಂತರ ತಂಗಿಯನ್ನು ಸೆಲ್ಯೂನ್ ಶಾಪ್ ಗೆ ಕರೆದೊಯ್ದು ತಲೆಬೋಳಿಸಿದ್ದಾನೆ. ನೊಂದ ಸಹೋದರಿ ಮೈಕೋಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಆರೋಪಿ ನಿಖಿಲ್ ಮಹಾಲಿಂಗಂ ಬಂಧನ

Leave a Reply

Your email address will not be published.