ಗದಗ : ಪ್ರಧಾನಿಗೆ ಪತ್ರ ಬರೆದ ಬಾಲಕಿ : Mann ki baat ನಲ್ಲಿ ಮೋದಿ ಪ್ರತಿಕ್ರಿಯೆ

ಗದಗ : ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ  ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ  ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷೇಶ್ವರ ಪಟ್ಟಣದ  ರೀದಾ ನಧಾಪ ಬರೆದ ಪತ್ರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದ ಆಕ್ಷಪರ್ಡ ಸ್ಕೂಲ್ ನ ವಿದ್ಯಾರ್ಥಿನಿ  ಇದೇ ತಿಂಗಳು .೧೪ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಫ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಾಲಕಿ ಪತ್ರ ಬರೆದಿದ್ದಳು. ಪತ್ರದಲ್ಲಿ ಮೋದಿಯವರಿಗೆ  ದೇಶದ ಸೈನಿಕರ ಮೇಲೆ  ಇರುವ ಕಾಳಜಿಯನ್ನ ನೋಡಿ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಳು ಜೊತೆಗೆ ಅವರ ನೋಟು ಬ್ಯಾನ ಸೇರಿದಂತೆ ವಿವಿಧ ಕಾಯ೯ಗಳ ಕುರಿತು ಹರ್ಷ ವ್ಯಕ್ತಪಡಿಸಿದ್ದರು.

ಇನ್ನು ಪ್ರಧಾನಿಯವರು ತಾಯಿ ಅವರ ಕುರಿತು ಸಹ ಪತ್ರದಲ್ಲಿ ಬರೆದಿದ್ದಳು ಒಬ್ಬ ದೇಶದ ಪ್ರಧಾನಿಯ ತಾಯಿಯಾದರು ಸಹ ಎಲ್ಲ ಸಾಮಾನ್ಯ ನಾಗರಿಕರಂತೆ ಬದುಕುತ್ತಿರುವ ಅವರ ಆದರ್ಶಗಳು ನನಗೆ ತುಂಬಾ ಇಷ್ಟವಾಗಿದೆ ಎಂದು ತನ್ನ ಪತ್ರದಲ್ಲಿ ಈ ಬಾಲಕಿ ವ್ಯಕ್ತ ಪಡಿಸಿದ್ದಳು.

ಇಂದು ಈ ಕುರಿತು ತನ್ನ ಪತ್ರಕ್ಕೆ ಪತ್ರಕ್ಕೆ ಮನ್ ಕೀ ಭಾತ್ ಕಾಯ೯ಕ್ರಮ ದಲ್ಲಿ ಮೋದಿ ಅವರು ಪ್ರತಿಕ್ರಿಯೇ ನೀಡಿದ್ದನ್ನು ಕಂಡು ಅತೀವ ಸಂತಸವಾಗಿದೆ ಎಂದು ಬಾಲಕಿ ರೀದಾ ಹರ್ಷ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಭಾರತೀಯ ಸೈನಿಕರಿಗೆ ಹಾಗೂ ಸೈನಿಕರ ಕುಟುಂಬಕ್ಕೆ ಇನ್ನು ಹೆಚ್ಚಿನ ಸೌಲಭ್ಯವನ್ನ ನೀಡುವಂತೆ ಮನವಿ ಮಾಡಿದಳು ಜೊತೆಗೆ ತನಗಿರುವ ಮೋದಿಯವರನ್ನ ನೋಡುವ ತವಕವನ್ನು  ಹಂಚಿಕೊಂಡಳು.

Leave a Reply

Your email address will not be published.

Social Media Auto Publish Powered By : XYZScripts.com