Cricket : ನಾಗ್ಪುರದಲ್ಲಿ ಭಾರತಕ್ಕೆ ಇನ್ನಿಂಗ್ಸ್ & 239 ರನ್ ಗೆಲುವು : ಕೊಹ್ಲಿ ಪಂದ್ಯಶ್ರೇಷ್ಟ

ನಾಗ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಹಾಗೂ 239 ರನ್ ಭರ್ಜರಿ ಜಯ ಸಾಧಿಸಿದೆ. 2ನೇ ಇನ್ನಿಂಗ್ಸ್ ನಲ್ಲಿ 166 ಕ್ಕೆ ಆಲೌಟ್ ಆದ ಶ್ರೀಲಂಕಾ ಸೋಲನುಭವಿಸಿದೆ. ಶ್ರೀಲಂಕಾ ಪರವಾಗಿ ಅರ್ಧಶತಕ ಬಾರಿಸಿದ ದಿನೇಶ್ ಚಂಡಿಮಲ್ (61) ಹೋರಾಟ ವ್ಯರ್ಥವಾಯಿತು. ಭಾರತದ ಪರವಾಗಿ ಸ್ಪಿನ್ನರ್ ಗಳಾದ ರವಿಚಂದ್ರನ್ ಅಶ್ವಿನ್ 4, ರವೀಂದ್ರ ಜಡೇಜಾ 2 ಹಾಗೂ ವೇಗಿಗಳಾದ ಇಶಾಂತ್ ಶರ್ಮಾ 2, ಉಮೇಶ್ ಯಾದವ್ 2 ವಿಕೆಟ್ ಪಡೆದರು.

ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 610 ರನ್ನುಗಳ ಬೃಹತ್ ಮೊತ್ತ ಸೇರಿಸಿತ್ತು. ಅದ್ಭುತ ಬ್ಯಾಟಿಂಗ್ ನಡೆಸಿದ ಭಾರತದ ಬ್ಯಾಟ್ಸಮನ್ ಗಳಾದ ಮುರಳಿ ವಿಜಯ್ (128) , ಚೇತೇಶ್ವರ ಪೂಜಾರಾ (143), ರೋಹಿತ್ ಶರ್ಮಾ (102) ಶತಕ ಗಳಿಸಿದ್ದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕರಿಯರ್ ನಲ್ಲಿ 5 ನೇ ಬಾರಿಗೆ ದ್ವಿಶತಕ ಸಿಡಿಸಿದ್ದರು. ಅಮೋಘ ದ್ವಿಶತಕ ಬಾರಿಸಿದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದಾರೆ.

ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com