BMTC : ಸಿಬ್ಬಂದಿಗಳಿಗೆ ಬಯೊಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ ಜಾರಿಗೆ ನಿರ್ಧಾರ….

ಬೆಂಗಳೂರು : ಬಿಎಂಟಿಸಿ ನೌಕರರು ಹಾಗೂ ಸಿಬ್ಬಂದಿಗಳು ತಮ್ಮ ಹಾಜರಾತಿ ನೋಂದಾಯಿಸಲು ಕೂಡ ಆಧಾರ್ ಕಾರ್ಡ್ ನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ಹೊಸ ನಿಯಮವನ್ನು ಶೀಘ್ರದಲ್ಲಿಯೇ ಜಾರಿಗೆ ತರಲು ನಿಗಮ ನಿರ್ಧರಿಸಿದೆ.

ಆಧಾರ್ ಆಧಾರಿತ ಹಾಜರಾತಿ ಹಾಗೂ ವೇತನನ ನಿರ್ವಹಣೆ ಪದ್ಧತಿ ಜಾರಿಯಾದ ಬಳಿಕ ಈ ವಿಶಿಷ್ಟ ಗುರುತಿನ ಪ್ರಧಾನಿಕಾರದ(ಯುಐಡಿಎಐ) ವ್ಯವಸ್ಥೆಯ ಮೂಲಕ ನೌಕರರ ಹಾಜರಾತಿಯನ್ನು ಗುರುತಿಸಿ ಮಾನ್ಯಮಾಡಲಾಗುತ್ತದೆ. ಹಾಜರಾತಿಗಾಗಿಯೇ ಬಯೋ ಮೆಟ್ರಿಕ್ ವ್ಯವಸ್ಥೆಗಳನ್ನು ಡೀಪೋಗಳು, ಬಸ್ ಸ್ಟ್ಯಾಂಡ್, ತರಬೇತಿ ಸಂಸ್ಥೆಗಳು ಸೇರಿದಂತೆ 100 ಸ್ಥಳಗಳಲ್ಲಿ ಅಳವಡಿಸಲಾಗುತ್ತಿದೆ.

ಪ್ರಸ್ತುತ ಬಿಎಂಟಿಸಿಯಲ್ಲಿ ಚಾಲಕರು ಹಾಗೂ ನಿರ್ವಾಹಕರನ್ನೂ ಒಳಗೊಂಡಂತೆ 34,280 ಸಿಬ್ಬಂದಿಗಳಿದ್ದಾರೆ. ಇವರೆಲ್ಲರೂ ಈ ವರೆಗೂ ಕೈಯಿಂದ ಹಾಜರಾತಿ ನೋಂದಾಯಿಸುತ್ತಿದ್ದಾರೆ. ಆದರೆ ಒಮ್ಮೆ ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ ಜಾರಿಗೆ ಬಂದ ಮೇಲೆ ಫಿಂಗರ್ ಪ್ರಿಂಟ್ ಮೂಲಕ ಹಾಜರಾತಿಯನ್ನು ತೆಗೆದುಕೊಳ್ಳಲಾಗುತ್ತದೆ. ಅದು ಆತೋಮೆಟಿಕ್ ಆಗಿ ಕೇಂದ್ರ ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಗೆ ರವಾನೆಯಾಗಿ ಪರಿಶೀಲನೆಗೊಳ್ಳುತ್ತದೆ.

ಕೇವಲ ಒಂಭತ್ತು ಸೆಕೆಂಡ್ ಗಳಲ್ಲಿ ನೌಕರರ ಹಾಜರಾತಿಯನ್ನು ಗುರುತಿಸಬಹುದಾಗಿದೆ. ಈ ನೂತನ ವ್ಯವಸ್ಥೆಯು ಬಿಎಂಟಿಸಿ ಸಿಬ್ಬಂದಿಗಳಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನೀಡುತ್ತದೆ. ಅಲ್ಲದೇ ನಾವು ಯಾವುದೇ ಸಮಯದಲ್ಲಾದರೂ ಸಿಬ್ಬಂದಿಗಳು ಯಾವ ವೇಳೆಗೆ ಕೆಲಸಕ್ಕೆ ಹಾಜರಾಗಿದ್ದಾರೆ ಹಾಗೂ ಯಾವಸಮಯಕ್ಕೆ ಕೆಲಸದಿಂದ ತೆರಳಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ ಎಂದು ಬಿಎಂಟಿಸಿ ಚೇರ್ ಮೆನ್ ನಾಗರಾಜು ಯಾದವ್ ಬೆಂಗಳೂರು ಮಿರರ್ ಗೆ ತಿಳಿಸಿದ್ದಾರೆ.

Leave a Reply

Your email address will not be published.