Namma Metro : Weakend ನಲ್ಲಿ 10ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ….

ಬೆಂಗಳೂರು : BMRCL ಇನ್ಮುಂದೆ ವಾರಾಂತ್ಯದಲ್ಲಿ ಹತ್ತು ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರಕ್ಕೆ ನಿಯಮ ಜಾರಿಗೊಳಿಸಿದೆ. ಎರಡು ರೈಲುಗಳ ನಡುವಿನ ಸಮಯದ ಅಂತರವನ್ನು 15 ನಿಮಿಷದಿಂದ 10 ನಿಮಿಷಕ್ಕೆ ಕಡಿತಗೊಳಿಸಿದ್ದು ನಿಗಮವು ಇದೇ ವೇಳಾಪಟ್ಟಿಯನ್ನು ಮುಂದುವರಿಸಲು ತೀರ್ಮಾನಿಸಿದೆ.

ಬೆಳಗ್ಗೆ 8.45 ರಿಂದ 10.30 ರವರೆಗೆ, ನವೆಂಬರ್ 10 ಮತ್ತು ನವೆಂಬರ್ 26 ರಂದು 10 ನಿಮಿಷಗಳ ಅಂತರದಲ್ಲಿ ರೈಲುಗಳ ನಿರ್ವಹಣೆ ಮಾಡಲಾಗಿತ್ತು. ಭಾನುವಾರ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್ ಸಿ ಎಲ್ ನ ಕಾರ್ಯಾಚರಣೆ ಹಾಗೂ ನಿರ್ವಹಣಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್. ಶಂಕರ್ ತಿಳಿಸಿದ್ದಾರೆ.

ಮೆಟ್ರೋ ನಿಗಮದ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರು ಹೇಳುವಂತೆ ಕಳೆದ ಅಕ್ಟೋಬರ್ ನಲ್ಲಿದ್ದಷ್ಟೇ ಸಂಖ್ಯೆಯ ಪ್ರಯಾಣಿಕರು ನವೆಂಬರ್ ನಲ್ಲಿಯೂ ಮುಂದುವರಿದಿದ್ದಾರೆ ಹೊರತು ಇದರಲ್ಲಿ ಹೆಚ್ಚಳವಾಗಿಲ್ಲ “ಕಳೆದ ತಿಂಗಳ ಉತ್ತರಾರ್ಧದಲ್ಲಿ ಹಾಗೆಯೇ ಸಾಮಾನ್ಯವಾಗಿ ಅಕ್ಟೋಬರ್ ನಲ್ಲಿ ಪ್ರಯಾಣಿಕರ ಸಂಖ್ಯೆ ಅತಿ ಹೆಚ್ಚು ಇರುತ್ತದೆ. ಕಳೆದ ತಿಂಗಳು ನಾವು 4 ಲಕ್ಷ ಪ್ರಯಾಣಿಕರನ್ನು ಕಂಡಿದ್ದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಒಟ್ಟು ನಾಲ್ಕು ಬಾರಿ 4 ಲಕ್ಷ ದ ಗಡಿ ದಾಟಿತ್ತು. ಆದರೆ ನವೆಂಬರ್ ನಲ್ಲಿ ಅಷ್ಟೊಂದು ಜನದಟ್ಟಣೆ ಇರದಿದ್ದರೂ 3.7 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ.

ನವೆಂಬರ್ ನಲ್ಲಿ ಇದುವರೆಗೆ ಒಂದೇ ದಿನ 3.8 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿರುವುದು ಉತ್ತಮ ದಾಖಲೆಯಾಗಿದೆ. ಇದೇ ಅಕ್ಟೋಬರ್ ನಲ್ಲಿ 4.12 ಮಂದಿ ಪ್ರಯಾಣ ಬೆಳೆಸಿದ್ದರು. ಕಳೆದ ತಿಂಗಳು ಮೆಟ್ರೋ ಪ್ರಯಾಣ ದರಗಳಿಂದ ಬಂದ ಆದಾಯ `90 ಲಕ್ಷವಾಗಿದ್ದು ಈ ತಿಂಗಳು ಸಹ ಅಷ್ಟೇ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ

Leave a Reply

Your email address will not be published.

Social Media Auto Publish Powered By : XYZScripts.com