BJP ಯವರಿಗೆ ಸತ್ಯ ಹೇಳೋಕೆ ಬರಲ್ಲ. ಸುಳ್ಳು ಹೇಳೋದು ಅವರ ಕಸುಬು : ಸಿಎಂ

ಗದಗ : ಗದಗ ಜಿಲ್ಲೆ ನರಗುಂದನಲ್ಲಿ ಸಿ.ಎಮ್ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಏನಿದೆ ಆರೋಪ..? ಬಿಜೆಪಿ ನವರು ಆಧಾರ ರಹಿತವಾದ ಆರೋಪ ಮಾಡ್ತಾ ಇದ್ದಾರೆ. ವಿನಯ್ ಕುಲಕರ್ಣಿ ಇಮೇಜ್ ಕರಾಬ್ ಮಾಡಲು ಹುಟ್ಟು ಹಾಕಿರುವ ಹುನ್ನಾರವಿದು. ಲಿಂಗಾಯತ ಪ್ರತೇಕ ಹೋರಾಟದಲ್ಲಿ ಅವರು ಪಾಲ್ಗೊಂಡಿದಕ್ಕೆ ಯಡಿಯೂರಪ್ಪ ಈ ರೀತಿ ಗೂಬೆ ಕೂಡಿಸಿದ್ದಾರೆ. ಕೆಂಪಯ್ಯನವರನ್ನೂ ಸಹ ತಳಕು ಹಾಕಿಕೊಂಡಿದ್ದಾರೆ ಕೆಂಪಯ್ಯನವರಿಗೂ ಇದಕ್ಕೂ ಯಾವುದೇ ಸಂಬಂಧವೇ ಇಲ್ಲ.

ಬಿಜೆಪಿ ಅವರಿಗೆ ಸುಳ್ಳು ಹೇಳೋದೆ ಒಂದು ಕಸುಬು ಆಗಿದೆ. ಬಿಜೆಪಿನವರಿಗೆ ಸತ್ಯ ಹೇಳೋದೆ ಗೊತ್ತಿಲ್ಲ. ಕಾಂಗ್ರೇಸ್ ನ ಕೆಲವು ಶಾಸಕರು, ಸಚಿವರು ಬಿಜೆಪಿಗೆ ಹಾಗೂ ಜೆಡಿಎಸ್ ಗೆ ಸೇರೋದು ಸುಳ್ಳು. ಕೆಲ ಬಿಜೆಪಿ ಶಾಸಕರು ಶಾಸಕರುಗಳೇ ನನ್ನ ಸಂರ್ಪಕದಲ್ಲಿದ್ದಾರೆ.

ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ನಾನು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಾಕಷ್ಟು ಪತ್ರ ಬರೆದಿದ್ದೆನೆ. ಸಂಧಾನಕ್ಕೆ ಬಿಜೆಪಿ ನವರೆ ಮುಂದೆ ಬರ್ತಿಲ್ಲ. ೩ ವರ್ಷದಿಂದ ಯಡಿಯೂರಪ್ಪ ಸುಮ್ಮನಿದ್ದು ೧ ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳಿದ್ದಾರೆ. ಅದಕ್ಕೆ ನಾನು ಸ್ವಾಗತಿಸುತ್ತೆನೆ. ಅವರು ನಮ್ಮನ್ನ ಎಲ್ಲೂ ಕರೆದ್ರೂ ಹೊಗುತ್ತೇನೆ. ಟ್ರಿಬ್ಯೂನಲ್ ಹೊರಗೆ ಬಗೆಹರಿಸುವುದಾಗಿ ಸ್ಪಷ್ಟ ಪಡಿಸಿದೆ. ಯಡಿಯೂರಪ್ಪ ಏನೆ ಭರವಸೆ ನೀಡಲಿ, ಪ್ರಧಾನಿ ಎಂಟ್ರಿ ಆದ್ರೆ ಮಾತ್ರ ಸಾಧ್ಯ. ನರೇಂದ್ರ ಮೋದಿ ಮಧ್ಯಸ್ಥಿಕೆ ಇಲ್ಲವಾದ್ರೆ ಸಾಧ್ಯವೇ ಇಲ್ಲ ಗದಗ ಜಿಲ್ಲೆ ನರಗುಂದ ನಲ್ಲಿ ಸಿ.ಎಮ್ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗದಗ ಜಿಲ್ಲೆಯ ನರಗುಂದ ಪಟ್ಟಣಕ್ಕೆ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಆಗಮಿಸಿದ್ದರು. ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿ ಬೆಳಗುವ ಮೂಲಕ ಯೋಜನೆ ಕಾರ್ಯಕ್ಕೆ ಚಾಲನೆ ನೀಡಿದರು.

ನರಗುಂದ ವಿಧಾನಸಭಾ ಕ್ಷೇತ್ರದ ೨೧ ಕಾರ್ಯಕ್ರಮಗಳು ೧೨೭೭.೭೦ ಕೋಟಿ ರೂಪಾಯಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದರು. ಪ್ರಸಕ್ತ ಸಾಲಿನ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮಾಡಿದರು.

ನರಗುಂದದಲ್ಲಿ ನೂತನ ಇಂಜಿನಿಯರಿಂಗ್ ಕಾಲೇಜ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಸಮಾರಂಭ, ಕೃಷಿ ಹೊಂಡಕ್ಕೆ ಬಾಗಿನ ಅರ್ಪಣೆ, ಮಲಪ್ರಭಾ ಕಾಲುವೆ ಆಧುನೀಕರಣ, ನರಗುಂದ ಪಟ್ಟಣಕ್ಕೆ ೨೪*೭ ಕುಡಿಯೋ ನೀರಿನ ಯೋಜನೆ ಸೇರಿದಂತೆ ೨೧ ಕಾರ್ಯಕ್ರಮಗಳಿಗೆ ಸಿ.ಎಂ ಸಿದ್ದರಾಮಯ್ಯ ನವರಿಂದ ಚಾಲನೆ ದೊರೆಯಿತು. ಈ ವೇಳೆ ನರಗುಂದ ಮತಕ್ಷೇತ್ರದ ಸಾಧನೆ ಸಾಕ್ಷಿ ಪುಸ್ತಕ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಸಿ.ಎಮ್ ಗೆ ಸಚಿವರಾದ ಎಚ್.ಕೆ ಪಾಟೀಲ್, ಡಿ.ಕೆ ಶಿವಕುಮಾರ್, ಎಮ್.ಬಿ ಪಾಟೀಲ್, ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಎನ್.ಎಚ್ ಕೋನರೆಡ್ಡಿ, ಶಿನಿವಾಸ್ ಮಾನೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಾಸಪ್ಪ ಕುರುಡಗಿ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published.