Gujarat poll : ನಾನು ಚಹಾ ಮಾರುವವ ಆದರೆ ದೇಶವನ್ನು ಮಾರಾಟ ಮಾಡಿಲ್ಲ – PM ಮೋದಿ..

ರಾಜ್ ಕೋಟ್ : `ನಾನು ಚಹಾ ಮಾರಿದ್ದು  ನಿಜ. ಚಹಾ ಮಾರುವವ ಕೂಡ ಹೌದು, ಆದರೆ ಎಂದಿಗೂ ದೇಶವನ್ನು ಮಾರಾಟ ಮಾಡಿಲ್ಲ ‘ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಾಕ್ಕೆ ಧುಮುಕಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸೋಮವಾರ ನಡೆದ ಚುನಾವಣಾ ಪ್ರಚಾರದ ರ್ಯಾಲಿತಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಮುಖಂಡರ ವಿರುದ್ಧ ತೀವ್ರ ವಾಗ್ಬಾಣ ಬಿಟ್ಟರು.

ರಾಜ್‌ಕೋಟ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಚಹಾ ಮಾರುವವ ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ಗುಜರಾತ್ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದೀರಿ, ಇದೇ ಕಾರಣದಿಂದ ಗುಜರಾತ್ ಹಿಂದುಳಿಯುವಂತಾಗಿತ್ತು, ಇದಕ್ಕಾಗಿ ನಿಮ್ಮನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನೋಟು ನಿಷೇಧದಿಂದ ಕಾಂಗ್ರೆಸ್ ನವರಿಗೆ ಅಸಮಾಧಾನವಾಗಿದೆ. ಆದ್ದರಿಂದಲೇ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ. ನಾನು ಸರ್ದಾರ್ ಪಟೇಲರು ಜನಿಸಿದ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇನೆ, ಬಡವರಿಗೆ ಸೇರಬೇಕಾದ್ದು ಸೇರುವಂತೆ ಮಾಡಿಯೇ ಸಿದ್ಧ, ದೇಶವನ್ನು ಲೂಟಿ ಮಾಡಲು ಬಿಡುವುದಿಲ್ಲ ಎಂಬುದನ್ನು ಕಾಂಗ್ರೆಸ್ ನವರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ ಮೋದಿ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ಼ ಇಗ ಮಾಡುತ್ತಿರುವುದೇನು, ಉದ್ಯಮಿಗಳ ಕೈಗೆ ದೇಶ ಕೊಟ್ಟು, ಬಡವರನ್ನು ಶೋಸಿಸುತ್ತಿದ್ದಿರಿ ಎಂದು ತೀರುಗೇಟು ನೀಡಿದೆ…

Leave a Reply

Your email address will not be published.

Social Media Auto Publish Powered By : XYZScripts.com