BJP ಯವ್ರು ಬ್ಲೂ ಫಿಲ್ಮ್ ನೋಡ್ತಾ, ಜೈಲು ಸುತ್ತಾಡ್ಕೊಂಡು ಹೋಗ್ಲಿ : ಡಿಕೆಶಿ

ಗದಗ : ಗದಗ ಜಿಲ್ಲೆ ನರಗುಂದ ನಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ ಹೇಳಿಕೆ ನೀಡಿದ್ದಾರೆ. ‘ ಬಿಜೆಪಿ ಐದು ವರ್ಷದಲ್ಲಿ 20 ಜನ ಸಚಿವರು ರಾಜಿನಾಮೆ ಕೊಟ್ಟಿದ್ದಾರೆ. 10ಕ್ಕೂ ಹೆಚ್ಚು ಸಚಿವರು ಜೈಲಿಗೂ ಹೋದ್ರು. ಸೈಕಲ್, ಸೀರೆ ಬಿಟ್ರೆ ಬಿಜೆಪಿಯವ್ರು ರಾಜ್ಯಕ್ಕೆ ಕೊಟ್ಟ ಬೃಹತ್ ಯೋಜನೆ ಯಾವುದಿದೆ?. ಬಿಜೆಪಿ ವಿರುದ್ಧ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರ 2.5 ರೂಪಾಯಿಗೆ ವಿದ್ಯುತ್ ಕೊಟ್ರೆ ರಾಜ್ಯಕ್ಕೆ ಹಗಲೆಲ್ಲ ವಿದ್ಯುತ್ ಕೊಡುತ್ತೇವೆ. ಕಾಂಗ್ರೆಸ್  ದೇಶದ ಶಕ್ತಿ ಹಾಗೂ ಇತಿಹಾಸವಾಗಿದೆ‌. ಎಷ್ಟು ದಿನ ಅಧಿಕಾರದಲ್ಲಿದ್ದೇವೆ ಅನ್ನೋದು ಮುಖ್ಯವಲ್ಲ. ಅಧಿಕಾರ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಅನ್ನೋದು ಮುಖ್ಯ. ಅತಿದೊಡ್ಡ ಸೋಲಾರ್ ಪಾರ್ಕ್ ಮಾಡೋ ಮೂಲಕ ಸಿ.ಎಮ್ ನೇತೃತ್ವದಲ್ಲಿ ದಾಖಲಾರ್ಹ ಕಾರ್ಯ ಮಾಡಿದ್ದೇವೆ.

‘ ಕೊಟ್ಟ ಕುದುರಿಯನ್ನು ಏರದವನು ವೀರನು ಅಲ್ಲ, ಶೂರನೂ ಅಲ್ಲ ಅಂತ ಬಿಜೆಪಿ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಅವ್ರು ಐದು ವರ್ಷ ಅಧಿಕಾರ ಅನುಭವಿಸಿದರು. ಐದು ವರ್ಷ ಬಿಜೆಪಿ ಅವಧಿಯಲ್ಲಿನ ಚಿತ್ರ ನಾಡಿನ ಜನ ನೋಡಿದ್ದಾರೆ. ಸುಳ್ಳಿನ ಕಂತೆಯ ಮೇಲೆ ಬಿಜೆಪಿಯವರು ಲೋಕ ಕಟ್ಟುತ್ತಾರೆ ‘ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಕಿಡಿಕಾರಿದ್ದಾರೆ.

ಡಿ.ಕೆ.ಶಿವಕುಮಾರ ಕೇಂದ್ರ ಸರ್ಕಾರ ಕೊಟ್ಟ ದರಕ್ಕಿಂತ ಹೆಚ್ಚಿನ ದರ ವಿದ್ಯುತ್ ಕೊಡ್ತಾರೆ ಅನ್ನೋ ಆರೋಪಕ್ಕೆ ಪ್ರತಿಕ್ರಯಿಸಿದ ಡಿಕೆಶಿ ‘ ಕೇಂದ್ರ ಸರ್ಕಾರ 2.5 ರೂಪಾಯಿಗೆ ವಿದ್ಯುತ್ ಕೊಟ್ರೆ ರಾಜ್ಯಕ್ಕೆ ಹಗಲೆಲ್ಲ ವಿದ್ಯುತ್ ಕೊಡ್ತಿನಿ. ಬಿಜೆಪಿ ಅವ್ರಿಗೆ ಸುಳ್ಳು ಹೇಳೋಕು ಇತಿಮಿತಿ ಇರಬೇಕು. ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ರಾಜ್ಯ ಸರ್ಕಾರ ಮಾಡಿದೆ. ಕಾಂಗ್ರೆಸ್ ಶಕ್ತಿ ಹಾಗೂ ಇತಿಹಾಸ ಈ ದೇಶದ ಶಕ್ತಿ, ಇತಿಹಾಸವಾಗಿದೆ‌. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಿಂದಿನ ಬಿಜೆಪಿ, ಜೆಡಿಎಸ್ ಗೇಕೆ ಮಾಡೋಕಾಗ್ಲಿಲ್ಲ.

ಅತೀದೊಡ್ಡ ಸೋಲಾರ್ ಪಾರ್ಕ್ ಮಾಡೋ ಮೂಲಕ ಸಿಎಮ್ ನೇತೃತ್ವದಲ್ಲಿ ದಾಖಲಾರ್ಹ ಕಾರ್ಯ ಮಾಡಿದ್ದೇವೆ. ಬಿಜೆಪಿ ಮಿಷನ್-150 ಸಾಧ್ಯನಾ? ಅಧಿಕಾರ ಕೊಟ್ಟಾಗ ಅಭಿವೃದ್ಧಿ ಮಾಡದವರು ಈಗೇನು ಮಾಡ್ತಾರೆ? ಪಾಪ ಬಿಜೆಪಿ ಅವ್ರು ಬ್ಲೂ ಫಿಲ್ಮ ನೋಡ್ತಾ, ಜೈಲು ಸುತ್ತಾಡುಕೊಂಡು ಹೋಗ್ಲಿ ‘ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Leave a Reply

Your email address will not be published.