ಮದುವೆ  ಸಮಾರಂಭಗಳಿಗೆ ದುಬಾರಿ ಡಿಸೈನರ್ ಬಟ್ಟೆಗಳನ್ನು ಬಾಡಿಗೆಗೆ ನೀಡುತ್ತೆ ಈ ವೆಬ್ಸೈಟ್..!!

ಇಂದಿನ ದಿನದಲ್ಲಿ ಆನ್‌ಲೈನ್ ನಲ್ಲಿ ಇಂತಹ ಸೇವೆ ಲಭ್ಯವಿಲ್ಲ ಎನ್ನಲು ಸಾಧ್ಯವಿಲ್ಲ. ಇದೇ ಮಾದರಿಯಲ್ಲಿ ದೇಶದಲ್ಲಿ ಹೊಸದೊಂದು ವೆಬ್‌ಸೈಟ್ ಶುರುವಾಗಿದ್ದು, ದುಬಾರಿ ಬೆಲೆಯ ಡಿಸೈನರ್ ಡ್ರೆಸ್‌ಗಳನ್ನು ಆನ್‌ಲೈನಿನಲ್ಲಿ ಬಾಡಿಗೆ ನೀಡಲಿದೆ. ಅಲ್ಲದೇ ಆ ಬಟ್ಟೆಗಳನ್ನು ನಿಮ್ಮ ಅಳತೆಗೆ ಸರಿ ಹೋಗುವ ಮಾದರಿಯಲ್ಲಿ ನೀಡಲಿದೆ.
ಮದುವೆ ಮತ್ತು ಶುಭಸಮಾರಂಭಗಳಿಗೆ ದುಬಾರಿ ಬೆಲೆಯನ್ನು ನೀಡಿ ಬಟ್ಟೆಯನ್ನು ಕೊಳ್ಳಲು ಸಾಧ್ಯವಾಗದಿರುವ ಸಂದರ್ಭಗಳಲ್ಲಿ ಈ ಸೇವೆಯ ಲಾಭ ಪಡೆಯಬಹುದಾಗಿದೆ. FLYPROBE.COM ಎನ್ನುವ ವೆಬ್‌ಸೈಟ್ ದೇಶದ ಪ್ರಮುಖ ನಗರಗಳಲ್ಲಿ ತನ್ನ ಸೇವೆಯನ್ನು ಆರಂಭಿಸಿದ್ದು, ಕಡಿಮೆ ಬೆಲೆಗೆ ಬಟ್ಟೆಗಳನ್ನು ಬಾಡಿಗೆಗೆ ನೀಡಲಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿಯೂ ಲಭ್ಯ
ಪಾರ್ಟಿಗಳಿಗೆ, ಫೋಟೋ ಶೂಟ್‌ಗಳಿಗೆ ದುಬಾರಿ ಬೆಲೆಯ ಬಟ್ಟೆಗಳ ಅಗತ್ಯವಿರುತ್ತದೆ. ಆದರೆ ಅದನ್ನು ಖರೀದಿಸುವ ಸಾಧ್ಯತೆ ಕಡಿಮೆ ಒಂದು ದಿನ ಮಾತ್ರವೇ ತೊಡುವುದಕ್ಕೆ ಹೆಚ್ಚಿನ ಹಣವನ್ನು ವ್ಯರ್ಥಮಾಡುವುದು ಸರಿಯಲ್ಲ. ಇದಕ್ಕಾಗಿ FLYROBE.COM ಮೂಲಕ ಡಿಸೈನರಿ ಬಟ್ಟೆಗಳನ್ನು ರೆಂಟ್‌ಗೆ ಪಡೆಯಬಹುದು.

ಫಿಟ್ಟಿಂಗ್ ಸಹ ಲಭ್ಯ
ಅಲ್ಲದೇ ನೀವು ಬಯಸುವ ಬಟ್ಟೆಗಳನ್ನು ನಿಮ್ಮ ಅಳತೆಗೆ ಸರಿಹೊಂದುವಂತೆ ಮಾಡಿಕೊಡುವ ವ್ಯವಸ್ಥೆಯೂ ಇಲ್ಲಿದೆ. ನಿಮ್ಮ ಅಳತೆಯನ್ನು ನೀಡಿದರೆ ಅದೇ ಅಳತೆಯ ಬಟ್ಟೆಗಳು ನಿಮ್ಮದಾಗಲಿದೆ. ಬಾಡಿಗೆಗೆ ದೊರೆಯಲಿದೆ.


ಪುರುಷ-ಮಹಿಳೆರಿಗೆ ಲಭ್ಯ
ಇಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಬ್ಬರಿಗೂ ಸಹ ಸರಿ ಹೊಂದುವ ಡಿಸೈನರ್ ಬಟ್ಟೆಗಳು ದೊರೆಯಲಿದ್ದು, ಇದು ನಿಮ್ಮ ಅಂದವನ್ನು ಹೆಚ್ಚಿಸಲಿದ್ದು, ಬೆಲೆಗಳು ಸಹ ಅಷ್ಟೆನು ಹೆಚ್ಚಾಗಿಲ್ಲ ಎನ್ನಲಾಗಿದೆ. ಹೆಚ್ಚಿನ ಆಯ್ಕೆಗಳು ಇಲ್ಲಿ ಬಳಕೆದಾರರಿಗೆ ದೊರೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com