ಹಿಂದೂ ದಂಪತಿಗಳು ಕನಿಷ್ಟ ನಾಲ್ಕು ಮಕ್ಕಳನ್ನಾದರೂ ಹೊಂದಬೇಕು : ಗೋವಿಂದ್‌ ದೇವ್ ಮಹಾರಾಜ್‌

ಉಡುಪಿ : ಹಿಂದೂ ದಂಪತಿಗಳು ಕನಿಷ್ಟ ನಾಲ್ಕು ಮಕ್ಕಳನ್ನಾದರೂ ಹೊಂದಬೇಕು ಎಂದು ಉಡುಪಿಯ ಧರ್ಮ ಸಂಸದ್‌ನಲ್ಲಿ ಹರಿದ್ವಾರದ ಭಾರತ್‌ ಮಾತಾ ಮಂದಿರದ ಗೋವಿಂದ್‌ದೇವ್‌ ಗಿರಿಜಿ ಮಹಾರಾಜ್‌ ಸ್ವಾಮೀಜಿ ಹೇಳಿದ್ದಾರೆ.
ದೇಶದಲ್ಲಿ ಏಕರೂಪ ನಾಗರಿಕ ಪದ್ದತಿ ಜಾರಿಯಾಗಬೇಕು. ಅಲ್ಲಿಯವರೆಗೂ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದಿದ್ದಾರೆ. ಸರ್ಕಾರ ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಿದೆ. ಆದರೆ ಹಿಂದೂ ಜನಸಂಖ್ಯೆ ಕಡಿಮೆಯಿರುವ ಪ್ರದೇಶವನ್ನು ಕಳೆದುಕೊಳ್ಳಬೇಕಾಗುತ್ತಿದೆ. ದೇಶದಲ್ಲಿ ಜನಾಂಗೀಯ ಅಸಮಾನತೆ ಎದುರಾಗಿದೆ. ಆದ್ದರಿಂದ ಅಸಮತೋಲನ ಸಮತೋಲನಕ್ಕೆ ಬರುವವರೆಗೂ ಇಬ್ಬರು ಮಕ್ಕಳ ಬದಲು ನಾಲ್ಕು ಮಕ್ಕಳನ್ನು ಹಿಂದುಗಳು ಹೊಂದಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com