CM ತಾನು ದೊಡ್ಡ ಅಹಿಂದ ಲೀಡರ್‌ ಅನ್ಕೊಂಡಿದ್ದಾರೆ, ಅಂಬೇಡ್ಕರ್‌ಗಿಂತ ದೊಡ್ಡವರಾ : ಶೋಭಾ ಕರಂದ್ಲಾಜೆ

ಉಡುಪಿ : ಪ್ರಧಾನಿ ಮೋದಿ ಹುಲಿಯಂತೆ, ಸಿಎಂ ಸಿದ್ದರಾಮಯ್ಯ ಇಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ನಡೆಯುತ್ತಿರುವ ದರ್ಮ ಸಂಸದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಕೇಂದ್ರ ಸರ್ಕಾರದ ಜಾಹೀರಾತು ಹಾಕಿದಾಗ ಮೋದಿ ಅವರ ಫೋಟೋವನ್ನು ಚಿಕ್ಕದಾಗಿ ಹಾಕುತ್ತಾರೆ. ಆದರೆ ಸಿದ್ದರಾಮಯ್ಯ ಸರ್ಕಾರದ ಜಾಹೀರಾತು ಹಾಕಿದರೆ ಅವರ ಫೋಟೊವನ್ನು ದೊಡ್ಡದಾಗಿ ಬಳಕೆ ಮಾಡಿಕೊಳ್ಳುತ್ತಾರೆ.

ಸಿಎಂ ಸಿದ್ದರಾಮಯ್ಯ ಅಂಬೋಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇಂದು ಅಂಬೇಡ್ಕರ್‌ ದೇಶಕ್ಕೆ ಸಂವಿಧಾನ ಕೊಟ್ಟ ದಿನ. ಆದರೆ ಅವರ ಪೋಟೋವಿಲ್ಲದೆ ಜಾಹೀರಾತು ಹಾಕಿ ಪ್ರಮಾದ ಎಸಗಿರುವುದಾಗಿ ಸಿಎಂ ವಿರುದ್ದ ಕಿಡಿ ಕಾರಿದ್ದಾರೆ.

ಸಿಎಂ ತನ್ನನ್ನು ತಾನು ದೊಡ್ಡ ಅಹಿಂದ ನಾಯಕ ಎಂದು ಫೋಸ್‌ ಕೊಟ್ಟಿದ್ದಾರೆ. ಅಂಬೇಡ್ಕರ್‌ಗಿಂತ ಅವರೇನು ದೊಡ್ಡವರಾ..? ರಾಜ್ಯ ಸರ್ಕಾರ ಅಂಬೇಡ್ಕರ್‌ಗೆ ನಿರಂತರವಾಗಿ ಅವಮಾನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com