ಭಾರತಕ್ಕೆ ಬಂದಿಳಿದ ವಿಶ್ವಸುಂದರಿ ಮಾನುಷಿ ಚಿಲ್ಲರ್‌ : ತಾಯ್ನಾಡಿನಲ್ಲಿ ಅದ್ದೂರಿ ಸ್ವಾಗತ

ಮುಂಬೈ : 108 ರಾಷ್ಟ್ರಗಳ ಸುಂದರಿಯರನ್ನು ಸೋಲಿಸಿ 2017ರ ವಿಶ್ವಸುಂದರಿ ಪಟ್ಟ ಗೆದ್ದ ಮಾನುಷಿ ಚಿಲ್ಲರ್‌ ಭಾನುವಾರ ತವರು ನಾಡಿಗೆ ಆಗಮಿಸಿದ್ದಾರೆ.

ಹರಿಯಾಣ ಮೂಲದ ಮಾನುಷಿ ಶನಿವಾರ ಮುಂಜಾನೆ 1 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ವಿಮಾನ ನಿಲ್ದಾಣದಲ್ಲೇ ಅದ್ದೂರಿ ಸ್ವಾಗತ ಸಿಕ್ಕಿದೆ. ಮಾನುಷಿ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಇಂಡಿಯಾ ಇಂಡಿಯಾ ಎಂಬ ಘೋಷಣೆ ಕೂಗುವುದರ ಜೊತೆಗೆ ತ್ರಿವರ್ಣ ಧ್ವಜ ಹಾಗೂ ಮಾನುಷಿ ಪೋಸ್ಟರ್‌ ಹಿಡಿದು ಸಂಭ್ರಮಿಸಿದ್ದಾರೆ.

ಜೊತೆಗೆ ಹಿಂದೂ ಸಂಪ್ರದಾಯದಂತೆ ಮಾನುಷಿ ಹಣೆಗೆ ಕುಂಕುಮವಿಟ್ಟು ಸ್ವಾಗತಿಸಿದ್ದಾರೆ. ಮಾನುಷಿ ಆಗಮನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಭಾರತಕ್ಕೆ ಬಂದಿಳಿದ ಬಳಿಕ ಮೊದಲ ಬಾರಿಗೆ ಟ್ವೀಟ್‌ ಮಾಡಿರುವ ಮಾನುಷಿ ಚಿಲ್ಲರ್‌, ನನ್ನ ದೇಶಕ್ಕೆ ಹಿಂತಿರುಗುವುದು ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತಿದೆ. ನನಗೆ ಈ ರೀತಿ ಸ್ವಾಗತ ಕೋರಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದಿದ್ದಾರೆ.

 

 

Leave a Reply

Your email address will not be published.