ಖಿನ್ನತೆಗೆ ಜಾರಿದ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ….ಕಾರಣವೇನು..?

ದೆಹಲಿ : ಭಾರತದ ಮೋಸ್ಟ್‌ ವಾಂಟೆಡ್‌ ಉಗ್ರ, ಭೂಗತ ಪಾತಕಿ ದಾವೂದ್‌ ಇಬ್ರಾಹಿ ಕೌಟುಂಬಿಕ ಕಲಹಗಳಿಂದಾಗಿ ಬೇಸತ್ತು ಖಿನ್ನತೆಗೆ ಜಾರಿದ್ದಾನೆ ಎಂದು ಮೂಲಗಳು ತಿಳಿಸಿವೆ.
ದಾವೂದ್‌ ಇಬ್ರಾಹಿಂ ಮಗ ಮೋಯಿನ್‌ ನವಾಝಾ ಡಿ ಕಸ್ಕರ್‌, ದಾವೂದ್‌ನ ಕೃತ್ಯಗಳನ್ನು ವಿರೋಧಿಸುತ್ತಿದ್ದು, ಇದೆಲ್ಲವನ್ನು ಬಿಟ್ಟು ಮೌಲಾನಾ (ಧರ್ಮಗುರು) ಆಗಲು ಹೊರಟಿದ್ದಾನಂತೆ. ಈ ಹಿನ್ನೆಲೆಯಲ್ಲಿ ದಾವೂದ್‌ ಖಿನ್ನತೆಗೊಳಗಾಗಿದ್ದಾನೆ ಎನ್ನಲಾಗುತ್ತಿದೆ.
ದಾವೂದ್‌ನ ಏಕೈಕ ಪುತ್ರ ಮೋಯಿನ್‌ (31)ಗೆ ದಾವೂದ್‌ನ ಯಾವುದೇ ಕೆಲಸಗಳು ಇಷ್ಟವಾಗುತ್ತಿಲ್ಲವಂತೆ. ಅಲ್ಲದೆ ದಾವೂದ್‌ನ ಕಾನೂನು ಬಾಹಿರ ಕೆಲಸಗಳಿಗೆ ಮೋಯಿನ್‌ ವಿರೋಧ ವ್ಯಕ್ತಪಡಿಸುತ್ತಿದ್ದಾನಂತೆ. ಅಲ್ಲದೆ ಅಪ್ಪನ ಕೆಲಸಗಳು ನಮ್ಮ ಕುಟುಂಬಕ್ಕೆ ಕಳಂಕ ಎನ್ನುತ್ತಿದ್ದು, ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಧರ್ಮಗುರುವಾಗಿ, ಧಾರ್ಮಿಕ ಭೋದನೆ ಮಾಡಲು ಹೊರಟಿದ್ದಾನೆ.
ಇದರಿಂದ ದಾವೂದ್ ಮಾನಸಿಕವಾಗಿ ಕುಗ್ಗಿಹೋಗಿದ್ದಾನೆ ಎಂದು ಸೆಪ್ಟಂಬರ್‌ನಲ್ಲಿ ಪೊಲೀಸರಿಗೆ ಸೆರೆ ಸಿಕ್ಕಿರುವ ದಾವೂದ್‌ ಸಹೋದರ ಇಬ್ರಾಹಿಂ ಕಸ್ಕರ್‌ ಪೊಲೀಸರಿಗೆ ಹೇಳಿದ್ದಾನೆ.
ಮೋಯಿನ್ ಕುರಾನನ್ನು ಕಂಠಪಾಠ ಮಾಡಿದ್ದು ಸಾಕಷ್ಟು ಹೆಸರು ಮಾಡಿದ್ದಾನೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

Leave a Reply

Your email address will not be published.