ದೇಶದ ಈ ರಾಜ್ಯದ ಜಿಲ್ಲೆಯಲ್ಲಿ 3 ದಿನ ಇಂಟರ್‌ನೆಟ್‌ ಕಟ್‌…..ಕಾರಣವೇನು…?

ಇತ್ತೀಚಿನ ಯುವಜನತೆ ಊಟ ಬೇಕಾದರೂ ಬಿಟಟಾರು ಆದರೆ ಮೊಬೈಲ್‌ಗೆ ಇಂಟರ್ನೆಟ್‌ ಇಲ್ಲ ಎಂದರೆ ಸ್ಥಿಮಿತ ಕಳೆದುಕೊಂಡವರಂತಾಗಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಇಂಟರ್ನೆಟ್‌ ಎಂಬುದು ಮನುಷ್ಯನ ಜೀವನದ ಒಂದು ಭಾಗವಾಗಿ ಬಿಟ್ಟಿದೆ.

ಜನರ ಜೀವನದ ಅತ್ಯಮೂಲ್ಯ ಇಂಟರ್‌ನೆಟನ್ನು ನಿಲ್ಲಿಸಿಬಿಟ್ಟರೆ….ಏನಾಗಬಹುದು ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಹರಿಯಾಣದ 11 ಜಿಲ್ಲೆಗಳಿಗೆ ಅಲ್ಲಿನ ಸರ್ಕಾರ 3 ದಿನಗಳ ಕಾಲ ಇಂಟರ್ನೆಟ್‌ ಸೇವೆಯನ್ನು ಬಂದ್ ಮಾಡಿದೆಯಂತೆ. ಶನಿವಾರದಿಂದ ಇಂಟರ್‌ನೆಟ್‌ ಕಟ್‌ ಆಗಿದ್ದು, ಸೋಮವಾರದವರೆಗೂ ಇಂಟರ್‌ನೆಟ್‌ ಕಟ್‌ ಆಗಿರಲಿದೆ.

ಇಂಟರ್‌ನೆಟ್ ಕಟ್‌ ಮಾಡಲು ಅಲ್ಲಿ ನಡೆಯುತ್ತಿರುವ ಬೃಹತ್ ರ್ಯಾಲಿಗಳೇ ಕಾರಣ. ಹೌದು, ಹರಿಯಾಣದಲ್ಲಿ ಎರಡು ಸಾರ್ವಜನಿಕ ಬೃಹತ್‌ರ ರ್ಯಾಲಿಗಳು ನಡೆಯಲಿದ್ದು, ಶಾಂತಿ-ಸುವ್ಯನಸ್ಥೆ ಕಾಪಾಡುವ ಕಾರಣದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com