ಅಲ್ಲಾಹ್‌ನನ್ನು ಬಿಟ್ಟರೆ ನಾವು ನಂಬುವುದು ನಿಮ್ಮನ್ನೇ : ಸುಷ್ಮಾರನ್ನು ಹೊಗಳಿದ ಪಾಕ್‌ ಪ್ರಜೆ

ದೆಹಲಿ : ಸುಷ್ಮಾ ಜೀ ಅಲ್ಲಾಹ್‌ನನ್ನು ಬಿಟ್ಟರೆ ನಿಮ್ಮ ಮೇಲೆಯೇ ನಮಗೆ ಭರವಸೆ ಇರುವುದು ಎಂದು ಪಾಕಿಸ್ತಾನದ ಪ್ರಜೆ ಶಹಜೈಬ್‌ ಇಕ್ಬಾಲ್‌ ಎಂಬುವವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಹೊಗಳಿದ್ದಾರೆ.

ಲಾಹೋರ್‌ನಲ್ಲಿ ಇಕ್ಬಾಲ್‌ ಸಂಬಂಧಿಯೊಬ್ಬರಿಗೆ ಕಿಡ್ನಿ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗಾಗಿ ಆಗಮಿಸಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವೈದ್ಯಕೀಯ ವೀಸಾಗಾಗಿ ಸುಷ್ಮಾ ಅವರನ್ನು ಸಂಪರ್ಕಿಸುವ ವೇಳೆ ಈ ರೀತಿ ಹೊಗಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ನಿಮ್ಮ ನಂಬಿಕೆಯನ್ನು ಭಾರತ ಸುಳ್ಳು ಮಾಡುವುದಿಲ್ಲ. ತಕ್ಷಣವೇ ನಿಮಗೆ ವೀಸಾ ಕೊಡಿಸುತ್ತೇವೆ ಎಂದು ಇಕ್ಬಾಲ್ ಅವರಿಗೆ ಟ್ವಿಟರ್‌ ಮೂಲಕ ಹೇಳಿದ್ದಾರೆ.

ಭಾನುವಾರ ಸುಷ್ಮಾ ಸ್ವರಾಜ್‌ ಒಟ್ಟು 4 ಮಂದಿ ಪಾಕಿಸ್ತಾನಿಯರಿಗೆ ವೈದ್ಯಕೀಯ ವೀಸಾ ಕೊಡಿಸುವ ಭರವಸೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com