Cricket : ವಿರಾಟ್ ಕೊಹ್ಲಿ ಅಮೋಘ ದ್ವಿಶತಕ : ಸಂಕಷ್ಟದಲ್ಲಿ ಶ್ರೀಲಂಕಾ ತಂಡ

ನಾಗ್ಪುರದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೇಲೆ ಟೀಮ್ ಇಂಡಿಯಾ ಬಿಗಿಹಿಡಿತ ಸಾಧಿಸಿದೆ. ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 610 ರನ್ ಗಳಿಸಿದೆ. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 405 ರನ್ನುಗಳ ಬೃಹತ್ ಮುನ್ನಡೆಯನ್ನು ಪಡೆದುಕೊಂಡಿತು.

ಅಮೋಘ ದ್ವಿಶತಕ ಬಾರಿಸಿದ ನಾಯಕ ವಿರಾಟ್ ಕೊಹ್ಲಿ 213 ರನ್ ಗಳಿಸಿದರು. ಅದ್ಭುತ ಬ್ಯಾಟಿಂಗ್ ನಡೆಸಿದ ವಿರಾಟ್, 17 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಮಿಂಚಿನ ಶತಕ ಬಾರಿಸಿದ ರೋಹಿತ್ ಶರ್ಮಾ 102 ರನ್ ಗಳಿಸಿ, 8 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಲಂಕಾ ಪರವಾಗಿ ದಿಲ್ರುವಾನ್ ಪೆರೆರಾ 3 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ವೇಗಿ ಇಶಾಂತ್ ಶರ್ಮಾ ಆಘಾತ ನೀಡಿದರು. ಮೂರನೇ ದಿನದಾಟದ ಅಂತ್ಯಕ್ಕೆ ಲಂಕಾ 1 ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದೆ. 3ನೇ ದಿನದಾಟ ಮುಗಿದಾಗ ದಿಮುತ್ ಕರುಣರತ್ನೆ ಹಾಗೂ ಲಾಹಿರು ತಿರಿಮನ್ನೆ ಅಜೇಯರಾಗುಳಿದಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿಯಿದ್ದು ಶ್ರೀಲಂಕಾ ತಂಡ ಸಂಕಷ್ಟಕ್ಕೆ ಸಿಲುಕಿ ಸೋಲಿನ ಭೀತಿ ಎದುರಿಸುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com