Ashes Cricket : ಬ್ರಿಸ್ಬೇನ್ ಟೆಸ್ಟ್ : ಗೆಲುವಿನ ಸನಿಹದಲ್ಲಿ ಸ್ಟೀವ್ ಸ್ಮಿತ್ ಬಳಗ

ಬ್ರಿಸ್ಬೇನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಬಳಗ ಗೆಲುವಿನ ಸನಿಹದಲ್ಲಿದೆ. ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 195 ಕ್ಕೆ ಆಲೌಟ್ ಆಯಿತು. ಜೋಶ್ ಹೇಜಲ್ ವುಡ್, ಮಿಚೆಲ್ ಸ್ಟಾರ್ಕ್ ಹಾಗೂ ನೇಥನ್ ಲಾಯನ್ 3 ವಿಕೆಟ್ ಪಡೆದರು.

ಇಂಗ್ಲೆಂಡ್ ಕಾಂಗರೂಗಳಿಗೆ ಗೆಲ್ಲಲು 170 ರನ್ ಟಾರ್ಗೆಟ್ ನೀಡಿತು. ಗುರಿಯನ್ನು ಬೆನ್ನತ್ತಿರುವ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 114 ರನ್ ಗಳಿಸಿದೆ.  ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸಮನ್ ಗಳಾದ ಕ್ಯಾಮರಾನ್ ಬ್ರ್ಯಾನ್ ಕಾಫ್ಟ್ (51) ಹಾಗೂ ಡೇವಿಡ್ ವಾರ್ನರ್ (60) ಅಜೇಯರಾಗುಳಿದಿದ್ದಾರೆ.

ಮೊದಲ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಇನ್ನು ಕೇವಲ 56 ರನ್ ಅಗತ್ಯವಿದ್ದು ಸ್ಮಿತ್ ಪಡೆ ಗೆಲುವಿನ ಕನಸು ಕಾಣುತ್ತಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com