ಕೈಗೆ ಶಾಕ್ : ಚುನಾವಣೆ ಹೊಸ್ತಿಲಲ್ಲೇ ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಾಸಕ ಎಂ.ಪಿ ರವೀಂದ್ರ !
ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ಮಧ್ಯೆ ಹರಪ್ಪನಹಳ್ಳಿಯ ಕಾಂಗ್ರೆಸ್ ಶಾಸಕ ಎಂ.ಪಿ ರವೀಂದ್ರ ಪಕ್ಷಕ್ಕೆ ಹಾಗೂ ರಾಜಕೀಯ ಬದುಕಿಗೆ ಗುಡ್ ಬೈ ಹೇಳಿದ್ದಾರೆ.
ಸಜ್ಜನ ರಾಜಕಾರಣಿ ಎಂದು ಪ್ರಸಿದ್ಧರಾಗಿದ್ದ ಎಂ.ಪಿ ಪ್ರಕಾಶ್ ಪುತ್ರ ಎಂ.ಪಿ ರವೀಂದ್ರ ನನಗೆ ವೈಯಕ್ತಿಕವಾಗಿ ನೋವಾಗಿದೆ. ಆದ್ದರಿಂದ ರಾಜಕೀಯದಿಂದ ದೂರವಿದ್ದುಕೊಂಡೇ ಸಮಾಜಸೇವೆ ಮಾಡುತ್ತೇನೆ ಎಂದಿದ್ದಾರೆ.
ತಮ್ಮ ರಾಜಕೀಯ ನಿವೃತ್ತಿ ಘೋಷಿಸಲು ಹರಪ್ಪನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರವೀಂದ್ರ, ಇತ್ತೀಚಿನ ರಾಜಕಾರಣ ಬಹಳ ಹೊಲಸಾಗಿದೆ. ಚುನಾವಣೆ ದುಬಾರಿಯಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ತಂದೆಯ ಹೆಸರಿನಲ್ಲಿರುವ ಸಾಂಸ್ಕೃತಿಕ ವೇದಿಕೆಯ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದಿದ್ದಾರೆ.