WATCH : ಕಾಲಿವುಡ್‌ನಲ್ಲಿ ಬರ್ತಿದೆ ಉಳಿದವರು ಕಂಡಂತೆ ಸಿನಿಮಾದ ರಿಮೇಕ್ “ರಿಚಿ”

ನಟ ರಕ್ಷಿತ್‌ ಶೆಟ್ಟಿ ಅಭಿನಯದ ಉಳಿದವರು ಕಂಡಂತೆ ಸಿನಿಮಾ ತಮಿಳು ಭಾಷೆಯಲ್ಲಿ ರಿಮೇಕ್‌ ಆಗುತ್ತಿದ್ದು, ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದೆ.

ನಟ ರಕ್ಷಿತ್‌ ಶೆಟ್ಟಿಗೆ ಬ್ರೇಕ್‌ ಕೊಟ್ಟಿದ್ದ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾ ತಮಿಳಿನಲ್ಲಿ ರಿಚಿ ಎಂಬ ಹೆಸರಿನಲ್ಲಿ ಮೂಡಿಬಂದಿದ್ದು, ನಟ ನಿವಿನ್‌ ಪೌಲಿ ಸಿನಿಮಾದ ನಾಯಕರಾಗಿ ಅಭಿನಯಿಸಿದ್ದಾರೆ. ಇನ್ನು ಕನ್ನಡದಲ್ಲಿ ಪತ್ರಕರ್ತೆಯಾಗಿ ಶೀತಲ್‌ ಶೆಟ್ಟಿ ಅಭಿನಯಿಸಿದ್ದರೆ, ತಮಿಳಿನಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದಾರೆ. ಫಾದರ್‌ ಪಾತ್ರದಲ್ಲ ಪ್ರಕಾಶ್‌ ರೈ ನಟಿಸಿದ್ದಾರೆ.

ಟ್ರೇಲರ್‌ ರಿಲೀಸ್‌ ಕುರಿತು ನಟ ನಿವಿನ್‌ ಪ್ರತಿಕ್ರಿಯಿಸಿದ್ದು, ನಾನು ಸಿನಿಮಾದ ಬಗ್ಗೆ ಎಕ್ಸೈಟ್‌ ಆಗಿದ್ದೇನೆ ಎಂದಿದ್ದಾರೆ. ಗೌತಮ್‌ ರಾಮಚಂದ್ರನ್‌ ನಿರ್ದೇಶನದಲ್ಲಿ ರಿಚಿ ಸಿನಿಮಾ ಮೂಡಿಬಂದಿದೆ. ಆನಂದ್ ಪಯ್ಯನ್ನೂರ್‌ ಹಾಗು ವಿನೋದ್‌ ಶೋರ್ನುರ್‌ ಚಿತ್ರದ ನಿರ್ಮಾಪಕರಾಗಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com