ಅರೆಬೆತ್ತಲೆಗೊಳಿಸಿದ್ರು, ಮರಕ್ಕೆ ಕಟ್ಟಿ ಥಳಿಸಿದ್ರು, ಕೊಲೆ ಮಾಡಿದ್ರು…ಇಷ್ಟೆಲ್ಲಾ ನಡೆದದ್ದು ಯಾಕೆ…?

ಯಾದಗಿರಿ : ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಅರೆನಗ್ನಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಲಾಗಿದ್ದು, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿಯ ಹೊಸಳ್ಳಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಇಸಾಕ್‌ ಎಂದು ಗುರುತಿಸಲಾಗಿದೆ. ಇಸಾಕ್‌ ನಿರ್ಮಾಲಾ ಎಂಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಮಹಿಳೆಯ ಗಂಡ ಯಶುಮಿತ್ರ ಶಂಕೆ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಇಸಾಕ್‌ನನ್ನು ಯಶುಮಿತ್ರ ಹಾಗೂ ಆತನ ಸ್ನೇಹಿತರು ಅರೆಬೆತ್ತಲೆ ಮಾಡಿ, ಮರಕ್ಕೆ ಕಟ್ಟಿ, ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಇಸಾಕ್‌ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಇನ್ನು ಪತ್ನಿ ನಿರ್ಮಲಾಳನ್ನೂ ಮರಕ್ಕೆ ಕಟ್ಟಿ ಥಳಿಸಲಾಗಿದೆ. ಸದ್ಯ ನಿರ್ಮಲಾಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಯಾದಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಶುಮಿತ್ರ ಹಾಗೂ ಆತನ ಸ್ನೇಹಿತರು ಪರಾರಿಯಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com