ಪದ್ಮಾವತಿ ಬಿಡುಗಡೆಗೆ ಒಪ್ಪಿದರೆ ನಿಮಗೂ ಶೂರ್ಪನಕಿ ಗತಿ : ಮಮತಾ ಬ್ಯಾನರ್ಜಿಗೆ BJP ಎಚ್ಚರಿಕೆ

ದೆಹಲಿ : ಪದ್ಮಾವತಿ ಸಿನಿಮಾ ಕುರಿತ ಗಲಾಟೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪದ್ಮಾವತಿ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಿದರೆ
ಪರಿಣಾಮ ಸರಿ ಇರುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ನಾಯಕ ಸೂರಜ್ ಪಾಲ್ ಎಚ್ಚರಿಸಿದ್ದಾರೆ.
ಪದ್ಮಾವತಿ ಸಿನಿಮಾಗೆ ಅವಕಾಶ ನೀಡಿದರೆ ರಾಮಾಯಣದ ಶೂರ್ಪನಕಿಯ ಹಾಗೆ ರಾಕ್ಷಸೀ ಗುಣಗಳಿರುವ ಮಹಿಳೆಯರಿದ್ದಾರೆ. ಶೂರ್ಪನಖಿಯ ಮೂಗನ್ನು ಲಕ್ಷ್ಣಣ ಕತ್ತರಿಸಿದ್ದ. ಅದನ್ನು ಮಮತಾ ಬ್ಯಾನರ್ಜಿ ಎಂದಿಗೂ ಮರೆಯದಿರಲಿ ಎಂದಿದ್ದಾರೆ.
ಶುಕ್ರವಾರವಷ್ಟೇ ಪದ್ಮಾವತಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ಬಿಡುಗಡೆ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಅಲ್ಲದೆ ಅವರಿಗಾಗಿ ವಿಶೇಷ ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com