ಈಜಿಪ್ಟ್ : ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ : ಸ್ಫೋಟದಲ್ಲಿ 230 ಜನರ ಸಾವು

ಈಜಿಪ್ಟ್ ದೇಶದ ಉತ್ತರ ಸಿನಾಯಿ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರ ನಡೆದ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ಬಾಂಬ್ ಸ್ಫೋಟದಲ್ಲಿ 235 ಜನ ಸಾವಿಗೀಡಾಗಿದ್ದು, 120 ಜನ ಗಾಯಗೊಂಡಿದ್ದಾರೆ. ರಾವ್ದಾ ಮಸೀದಿಯಲ್ಲಿ ಸೂಫಿ ಸಮುದಾಯದ ಜನರು ಶುಕ್ರವಾರದ ಪ್ರಾರ್ಥನೆಗೆಂದು ಸೇರಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ.

Image result for al rawda attack

ಉತ್ತರ ಸಿನಾಯಿ ಪ್ರಾಂತ್ಯದ ಪ್ರಮುಖ ನಗರವಾದ ಬಿರ್ ಅಲ್ ಅಬೆದ್ ನ ಮಸೀದಿಯಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಶುಕ್ರವಾರದ ಪ್ರಾರ್ಥನೆಯನ್ನು ಸಲ್ಲಿಸಿ ಹೊರಗೆ ಬರುತ್ತಿದ್ದಾಗ ಬಾಂಬ್ ಸ್ಫೋಟಗೊಂಡಿದೆ. ಮಸೀದಿಯ ಹೊರಗೆ ಕಾಯುತ್ತ ಕುಳಿತಿದ್ದ 40 ಜನ ಬಂದೂಕುಧಾರಿ ಉಗ್ರರು ಗುಂಡಿನ ಮಳೆಗರೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ನಲ್ಲಿ ನಡೆದ ಭಯಾನಕ ದಾಳಿ ಇದಾಗಿದೆ. ಅಲ್ ಅರಬಿಯಾ ಹಾಗೂ ಸ್ಥಳೀಯ ಮಾಧ್ಯಮಗಳು ಇದು ಸೂಫಿಗಳನ್ನು ಗುರಿಯಾಗಿಸಿಕೊಮಡು ನಡೆದಿರಬಹುದಾದ ದಾಳಿಯಾಗಿದೆ ಎಂದು ಶಂಕಿಸಿವೆ. ಇದುವರೆಗೆ ಸ್ಫೋಟದ ಹೊಣೆಯನ್ನು ಯಾವ ಉಗ್ರ ಸಂಘಟನೆಗಳೂ ಹೊತ್ತುಕೊಂಡಿಲ್ಲ.

 

Leave a Reply

Your email address will not be published.