ಅತ್ಯಾಚಾರ ಆರೋಪ : ಹಿಂದಿ ಕಿರುತೆರೆ ನಟ ಪೀಯೂಷ್‌ ಸಹದೇವ್‌ ಬಂಧನ

ಮುಂಬೈ : ಅತ್ಯಾಚಾರ ಆರೋಪದಡಿ ಹಿಂದಿ ಟಿವಿ ಧಾರಾವಾಹಿ ನಟ ಪೀಯೂಷ್‌ ಸಹದೇವ್‌ನನ್ನು ಬಂಧಿಸಲಾಗಿದೆ. ಯುವತಿ ಜೊತೆ ಲಿವಿಂಗ್‌ ಟು ಗೆದರ್‌ ರಿಲೇಶನ್‌ ಷಿಪ್‌ನಲ್ಲಿದ್ದು ನನ್ನ ಮೇಲೆ ಅತ್ಯಾಚಾರವೆಸಗಿ ಕೊನೆಗೆ ಪರಾರಿಯಾಗಿದ್ದಾನೆ ಎಂದು ಯುವತಿಯೊಬ್ಬರು ದೂರು ನೀಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೇ ಪೀಯೂಷ್‌ ನನಗೆ ಪರಿಚಯವಾಗಿದ್ದ. ಫ್ಯಾಷನ್‌ ಕಾರ್ಯಕ್ರಮಗಳಲ್ಲಿ , ಟಿವಿ ಸೀರಿಯಲ್‌ಗಳಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿದ್ದ. ದಿನದಿಂದ ದಿನಕ್ಕೆ ನಮ್ಮಿಬ್ಬರ ಪರಿಚಯ ಹೆಚ್ಚಾಗಿ ಎರಡು ತಿಂಗಳಿನಿಂದ ಲಿವಿಂಗ್‌ ಟು ಗೆದರ್‌ ರಿಲೇಶನ್‌ಷಿಪ್‌ನಲ್ಲಿದ್ದೆವು. ಆದರೆ ಅವನಿಗೆ ಬೇರೆ ಹುಡುಗಿ ಜೊತೆ ಸಂಬಂಧವಿತ್ತು. ಅದನ್ನು ನಾನು ಪ್ರಶ್ನಿಸಿದಾಗ ನನ್ನಿಂದ ಬೇರೆಯಾಗಿ ಹೋಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ನವೆಂಬರ್‌ 22 ರಂದು ನಟನನ್ನು ಬಂಧಿಸಿರುವುದಾಗಿ ಪೊಲೀಸ್‌ ಮೂಲಗಳು ತಿಳಿಸಿದ್ದು, ನ.27ರ ತನಕ ವಿಚಾರಣೆಗೆ ಕಸ್ಟಡಿಗೆ ಪಡಿದಿದ್ದಾರೆ.
ಈತ ದೇವೋಂಕಿ ದೇವ್ ಮಹದೇವ್, ಗೀತ್‌, ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದರು.

 

 

 

 

Leave a Reply

Your email address will not be published.

Social Media Auto Publish Powered By : XYZScripts.com