Ranaji Cricket : ಶತಕ ಬಾರಿಸಿದ ಮಯಂಕ್, ಮನೀಶ್ : ಉತ್ತಮ ಮೊತ್ತದತ್ತ ಕರ್ನಾಟಕ

ದೆಹಲಿಯ ಕರ್ನೈಲ್ ಸಿಂಗ್ ಮೈದಾನದಲ್ಲಿ ಕರ್ನಾಟಕ ಹಾಗೂ ರೇಲ್ವೇಸ್ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದಕೊಂಡು ಕರ್ನಾಟಕ ಪ್ರಥಮ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 355 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸಮನ್ ಆರ್ ಸಮರ್ಥ್ ಕರಣ್ ಠಾಕೂರ್ ಎಸೆತದಲ್ಲಿ ಶೂನ್ಯಕ್ಕೆ ಔಟಾದರು.

ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಡಿ.ನಿಶ್ಚಲ್ (4) ಕರುಣ್ ನಾಯರ್ (10) ಮನೀಶ್ ರಾವ್ ಗೆ ವಿಕೆಟ್ ಒಪ್ಪಿಸಿದರು. ಶತಕ ಬಾರಿಸಿದ ಮನೀಶ್ ಪಾಂಡೆ 108 ರನ್ ಗಳಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು.

ಅಮೋಘ ಶತಕ ದಾಖಲಿಸಿದ ಮಯಂಕ್ ಅಗರವಾಲ್ 173 ರನ್ ಗಳಿಸಿ ವಿನೀತ್ ಗೆ ವಿಕೆಟ್ ಒಪ್ಪಿಸಿದರು. ಮಯಂಕ್ ತಮ್ಮ ಇನ್ನಿಂಗ್ಸ್ ನಲ್ಲಿ 17 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. 25 ರನ್ ಗಳಿಸಿರುವ ಸಿ ಎಮ್ ಗೌತಮ್ ಮೊದಲ ದಿನದಂತ್ಯಕ್ಕೆ ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.