WATCH : ಅಪ್ಪು ಜೊತೆ ರಶ್ಮಿಕಾ – ಭರ್ಜರಿಯಾಗಿ ಮೂಡಿಬಂದ ಅಂಜನೀಪುತ್ರ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್ ಅಭಿನಯದ ಬಹುನಿರೀಕ್ಷಿತ ಅಂಜನೀಪುತ್ರ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. 1 ನಿಮಿಷ 38 ಸೆಕೆಂಡ್‌ ಇರುವ ಈ ಟ್ರೇಲರ್‌ನಲ್ಲಿ ಪುನಿತ್‌ ರಾಜ್‌ ಕುಮಾರ್‌ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಆ್ಯಕ್ಷನ್‌ನಷ್ಟೇ ಸೆಂಟಿಮೆಂಟ್‌ ಸಹ ಇದೆ. ಟ್ರೇಲರ್‌ನಲ್ಲಿ ತಾಯಿ ಮಗನ ಪ್ರೀತಿ, ಡ್ರಾಮಾ, ಆ್ಯಕ್ಷನ್‌, ರೊಮ್ಯಾನ್ಸ್‌ ಇದ್ದು ಫ್ಯಾಮಿಲಿ ಎಂಟರ್‌ಟೈನ್‌ ಮೆಂಟ್ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ.

ಅಲ್ಲದೆ ಸಿನಿಮಾದಲ್ಲಿ ಪಂಚಿಂಗ್‌ ಡೈಲಾಗ್‌ಗಳಿಗೇನೂ ಕಡಿಮೆ ಇಲ್ಲ. ಸ್ವಾಮಿ ಜೆ ಅವರ ಛಾಯಾಗ್ರಹಣ ಸಿನಿಮಾಕ್ಕಿದ್ದು, ರವಿ ಬಸ್ರೂರ್‌ ಸುಮಧುರ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾಗೆ ಹರ್ಷ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಇನ್ನು ಸಿನಿಮಾದ ಮುಖ್ಯ ಆಕರ್ಷಣೆ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ. ಪುನಿತ್‌ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದರೆ, ಪುನಿತ್‌ ತಾಯಿಯಾಗಿ ರಮ್ಯಾ ಕೃಷ್ಣ  ಅದ್ಭುತ ನಟನೆ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪುನಿತ್ ತಮ್ಮ ಪಿಆರ್‌ಕೆ ಬ್ಯಾನರ್‌ನಡಿ ಅಂಜನೀಪುತ್ರ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

 

Leave a Reply

Your email address will not be published.