ಪಾಕ್‌ ಉಗ್ರ ಹಫೀಜ್‌ ಸಯೀದ್ ಬಿಡುಗಡೆ : ಯೋಗಿ ಆಡಳಿತದ ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

ಲಖನೌ : ಮುಂಬೈ ದಾಳಿಯ ರೂವಾರಿ ಹಫೀಜ್‌ ಸಯೀದ್ ಬಂಧನದಿಂದ ಇಂದು ಬಿಡುಗಡೆಯಾಗಿದ್ದು ವಿಶ್ವದ ರಾಷ್ಟ್ರಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿವೆ. ಆದರೆ ಉತ್ತರ ಪ್ರದೇಶದಲ್ಲಿ ಕೆಲ ದೇಶದ್ರೋಹಿಗಳು ಉಗ್ರನ ಬಿಡುಗಡೆ ಸಂಭ್ರಮ ವ್ಯಕ್ತಪಡಿಸಿವೆ.

ಉತ್ತರ ಪ್ರದೇಶದ ಬೇಗಂಬಾಗ್ ಕಾಲೋನಿಯಲ್ಲಿ ತಮ್ಮ ಮನೆಯ ಮೇಲೆ ಹಸಿರು ಧ್ವಜ ಹಾರಿಸಿ ಹಫೀಜ್‌ ಸಯೀದ್ ಝಿಂದಾಬಾದ್, ಪಾಕಿಸ್ತಾನ್‌ ಝಿಂದಾಬಾಗ್‌ ಎಂಬ ಘೋಷಣೆ ಕೂಗಿದ್ದಾರೆ.

ಈ ವಿಚಾರವನ್ನು ಕೂಡಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ತರಲಾಗಿದ್ದು, ತಪ್ಪಿತಸ್ಥರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿತ್ತಾದರೂ ಪೊಲೀಸರು ಇದನ್ನು ನಿರ್ಲಕ್ಷಿಸಿದ್ದರು. ಆದ್ದರಿಂದ ಮ್ಯಾಜಿಸ್ಟ್ರೇಟ್‌ಗೆ ವಿಷಯ ಮುಟ್ಟಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com