Cricket : ವಿಜಯ್, ಪೂಜಾರಾ ಶತಕದ ಮಿಂಚು : ಭಾರತಕ್ಕೆ 107 ರನ್ ಮುನ್ನಡೆ

ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 107 ರನ್ ಮುನ್ನಡೆ ಸಾಧಿಸಿದೆ. ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರಾ ಶತಕಗಳ ನೆರವಿನಿಂದ ಟೀಮ್ ಇಂಡಿಯಾ 2ವಿಕೆಟ್ ಕಳೆದುಕೊಂಡು 312 ರನ್ ಗಳಿಸಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ 10ನೇ ಶತಕ ಬಾರಿಸಿದ ಆರಂಭಿಕ ಬ್ಯಾಟ್ಸಮನ್ ಮುರಳಿ ವಿಜಯ್ 128 ರನ್ ಗಳಿಸಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಟೆಸ್ಟ್ ಕ್ರಿಕೆಟ್ ನಲ್ಲಿ 14 ನೇ ಶತಕ ದಾಖಲಿಸಿದ ಚೇತೇಶ್ವರ ಪೂಜಾರಾ 121 ರನ್ ಗಳಿಸಿ 13 ಬೌಂಡರಿ ಬಾರಿಸಿದರು. ವಿಜಯ್ ಔಟಾದ ನಂತರ ಬ್ಯಾಟ್ ಮಾಡಲು ಬಂದ ನಾಯಕ ವಿರಾಟ್ ಕೊಹ್ಲಿ ಮಿಂಚಿನ ಅರ್ಧಶತಕ ದಾಖಲಿಸಿ 6 ಬೌಂಡರಿಗಳನ್ನೊಳಗೊಂಡ 54 ರನ್ ಬಾರಿಸಿದರು.

ಎರಡನೇ ದಿನದಾಟದ ಅಂತ್ಯಕ್ಕೆ ಚೇತೇಶ್ವರ ಪೂಜಾರಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅಜೇಯರಾಗುಳಿದಿದ್ದಾರೆ. ಪಂದ್ಯದ ಮೇಲೆ ಬಿಗಿಹಿಡಿತ ಸಾಧಿಸಿರುವ ಭಾರತ, ಮೂರನೇ ದಿನ ಮುನ್ನಡೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡು ಲಂಕಾ ಮೇಲೆ ಒತ್ತಡ ಹೇರಲು ಪ್ರಯತ್ನಿಸಲಿದೆ. ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 205 ಕ್ಕೆ ಆಲೌಟ್ ಆಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com