ದೇಶದ ಕರಾವಳಿ ತೀರದ ಭದ್ರತೆಗೆ ಸಾಥ್‌ ನೀಡಲಿದೆ ಇಸ್ರೋ ಉಪಗ್ರಹ…..

ದೆಹಲಿ : ದೇಶದ ಕಡಲ ತೀರದಲ್ಲಿ ಓಡಾಡುವ ಅನುಮಾನಾಸ್ಪದ ಹಡಗುಗಳನ್ನು ಪತ್ತೆ ಹಚ್ಚಲು ಇಸ್ರೋದ ಉಪಗ್ರಹವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ದೇಶದ ಭದ್ರತೆಗೆ ಇದು ಸಹಕಾರಿಯಾಗಲಿದೆ.
ಮುಂದಿನ ವರ್ಷ ಮಾರ್ಚ್‌ ವೇಳೆಗೆ ಸಾವಿರ ಟ್ರಾನ್ಸ್‌ಫಾಂಡರ್‌ಗಳನ್ನು ನೀಡಲು ಇಸ್ರೋ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಉಗ್ರ ದಾಳಿಗಳನ್ನು ತಡೆಗಟ್ಟಲು ಇದು ಸಹಕಾರಿಯಾಗಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ಮುಂಬೈ ಉಗ್ರ ದಾಳಿಯ ಬಳಿಕ ಭದ್ರತೆಯನ್ನು ಹೆಚ್ಚಿಸಿದ್ದು, ಅನೇಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
20 ಮೀಟರ್‌ಗಿಂತ ಕಡಿಮೆ ಉದ್ದದ ಬೋಟ್‌ಗಳನ್ನು ಗುರುತಿಸುವಲ್ಲಿ ಇಸ್ರೋ ಸಹಕಾರಿಯಾಗಲಿದೆ. ಅಲ್ಲದೆ ಬೋಟ್‌ಗಳಿಗೆ ಸ್ವಯಂಚಾಲಿತ ಬಯೋಮೆಟ್ರಿಕ್‌ ಗುರುತು ಮಾಡಲಾಗುವುದು. ಜೊತೆಗೆ ರಾಜ್ಯ ಸರ್ಕಾರಗಳ ಮೂಲಕ ಕಲರ್‌ ಕೋಡಿಂಗ್‌ ಸಹ ಮಾಡಲಾಗುತ್ತದೆ. ಇದುವರೆಗೂ 19 ಲಕ್ಷಕ್ಕೂ ಅಧಿಕ ಮೀನುಗಾರರು ಬಯೋಮೆಟ್ರಿಕ್‌ ಗುರುತಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ದೇಶದ ಬೋಟ್‌ಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.

Leave a Reply

Your email address will not be published.