Cricket : ಕೇವಲ 2 ರನ್ ಗಳಿಗೆ ಆಲೌಟ್ ಆದ ನಾಗಾಲ್ಯಾಂಡ್ ಮಹಿಳಾ ತಂಡ..!

ನಾಗಾಲ್ಯಾಂಡ್ ನ 19 ವರ್ಷದೊಳಗಿನವರ ಮಹಿಳೆಯರ ತಂಡ ಕೇವಲ 2 ರನ್ ಗಳಿಗೆ ಆಲೌಟ್ ಆಗಿದೆ. ಕೇರಳ ಹಾಗೂ ನಾಗಾಲ್ಯಾಂಡ್ ತಂಡಗಳ ನಡುವೆ ಶುಕ್ರವಾರ ಗುಂಟೂರಿನ JKC ಕಾಲೇಜಿನ ಮೈದಾನದಲ್ಲಿ ನಡೆದ ಒನ್ ಡೇ ಲೀಗ್ ಪಂದ್ಯದಲ್ಲಿ ನಾಗಾಲ್ಯಾಂಡ್ ತಂಡದ ಮಹಿಳೆಯರು 2 ರನ್ ಮೊತ್ತಕ್ಕೆ ಎಲ್ಲ 10 ವಿಕೆಟ್ ಕಳೆದುಕೊಂಡಿದ್ದಾರೆ.

9 ವಿಕೆಟ್ ಪತನವಾಗುವವರೆಗೆ ಒಂದೂ ರನ್ ದಾಖಲಾಗಿರಲಿಲ್ಲ. ಆಗ ಆರಂಭಿಕ ಆಟಗಾರ್ತಿ ಮೇನಕಾ 1 ರನ್ ಗಳಿಸುವಲ್ಲಿ ಸಫಲರಾದರು. ಇನ್ನೊಂದು ರನ್ ಕೇರಳದ ಬೌಲರ್ ಅಲೀನಾ ಸುರೇಂದ್ರನ್ ಎಸೆದ ವೈಡ್ ನಿಂದ ಬಂದಿತು.

ನಾಗಾಲ್ಯಾಂಡ್ ಮಹಿಳೆಯರ ತಂಡದ 9 ಜನ ಬ್ಯಾಟ್ಸಮನ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಇದು ಈವರೆಗೆ ಬಿಸಿಸಿಐ ಆಯೋಜಿಸಿದ ಟೂರ್ನಮೆಂಟ್ ಗಳಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com