ಸರಿಗಮಪ ಸೀಸನ್‌ 14ಕ್ಕೆ “ನಾದಬ್ರಹ್ಮ”ನ ಆಗಮನ : ರಾಜೇಶ್‌ ಕೃಷ್ಣನ್‌ ಹೊರಗುಳಿಯಲು ಕಾರಣವೇನು..?

ಬೆಂಗಳೂರು : ಝೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಸರಿಗಮಪ ಸೀಸನ್‌ 14 ಸದ್ಯದಲ್ಲೇ ಪ್ರಾರಂಭವಾಗಲಿದೆ. ಈಗಾಗಲೆ ಆಡಿಷನ್‌ ಸಹ ನಡೆಯುತ್ತಿದ್ದು, ಡಿಸೆಂಬರ್‌ 2ನೇ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

ಈ ಬಾರಿಯ ಸರಿಗಮಪ ಬಹಳ ವಿಶೇಷತೆಯಿಂದ ಕೂಡಿರಲಿದೆ ಎಂದು ಝೀ ತಂಡ ಹೇಳುತ್ತಿದೆ. ಕಾರಣ ಅಂದ್ರೆ ಹಂಸಲೇಖ. ಹೌದು ಈ ಬಾರಿಯ ಸರಿಗಮಪ ಸೀಸನ್‌ 14ರಲ್ಲಿ ನಾದಬ್ರಹ್ಮ ಹಂಸಲೇಖ ತೀರ್ಪುಗಾರರಾಗಿರಲಿದ್ದಾರೆ. ರಾಜೇಶ್‌ ಕೃಷ್ಣನ್ ಅವರಿಗೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಈ ಸೀಸನ್‌ನ ತೀರ್ಪುಗಾರರಾಗಲು ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದ ಅವರ ಸ್ಥಾನದಲ್ಲಿ ಹಂಸಲೇಖ ಆಸೀನರಾಗಲಿದ್ದಾರೆ. ಇನ್ನು ಹಂಸಲೇಖ ಅವರಿಗೆ ಜಡ್ಜ್‌ಗಳಾಗಿ ವಿಜಯ್ ಪ್ರಕಾಶ್‌ ಹಾಗೂ ಅರ್ಜುನ್ಯ ಜನ್ಯ ಸಾಥ್‌ ನೀಡಲಿದ್ದಾರೆ. ಇನ್ನು ಕಾರ್ಯಕ್ರಮದ ನಿರೂಪಕಿಯಾಗಿ ಅನುಶ್ರೀ ಮುಂದುವರಿಯಲಿದ್ದಾರೆ.

ಈಗಾಗಲೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಆಡಿಷನ್‌ ನಡೆಸಲಾಗಿದ್ದು, 25 ರಿಂದ 30 ಸಾವಿರ ಮಕ್ಕಳು ಭಾಗವಹಿಸಿದ್ದರು. ಅದರಲ್ಲಿ 5 ರಿಂದ 13 ವರ್ಷದೊಳಗಿನ 16 ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

Leave a Reply

Your email address will not be published.