ಬಾಹುಬಲಿಯ ರಿಯಲ್‌ ಲೈಫ್‌ ದೇವಸೇನಾ ಯಾರು? ಕೊನೆಗೂ ಸಿಕ್ತು ಉತ್ತರ……?

ದಕ್ಷಿಣ ಭಾರತದ ಪ್ರಸಿದ್ದ ನಟ, ಬಾಹುಬಲಿಯ ಅಮರೇಂದ್ರ ಬಾಹುಬಲಿ ಮದುವೆ ವಿಚಾರ ಕೊನೆಗೂ ರಿವೀಲ್ ಆಗಿದೆ. ಹೌದು ಅವರು ಮದುವೆಯಾಗುತ್ತಿರುವ ಹುಡುಗಿ ಇನ್ಯಾರೂ ಅಲ್ಲ ದೇವಸೇನಾ ಖ್ಯಾತಿಯ ಅನುಷ್ಕಾ.

ಹೌದು ಬಾಹುಬಲಿ ಸಿನಿಮಾದ ಬಳಿಕ ಈ ಜೋಡಿ ಭಾರೀ ಫೆಮಸ್‌ ಆಗಿದೆ. ಅನೇಕ ಬಾರಿ ಸಂದರ್ಶನಗಳಲ್ಲಿ ಇವರಿಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇರುತ್ತಿತ್ತು. ಆದರೆ ನೀವಿಬ್ಬರೂ ಮದುವೆಯಾಗುತ್ತೀರಾ ಎಂಬ ಪ್ರಶ್ನೆಗೆ ಇಬ್ಬರೂ ಇಲ್ಲ ಎಂದೇ ಉತ್ತರಿಸುತ್ತಿದ್ದರು.

ಅವರಿಬ್ಬರೂ ಮದುವೆಯಾಗುವುದಿಲ್ಲ ಎಂದು ಹೇಳಿದರೂ ಇನ್ನೂ ಅವರ ಬಗ್ಗೆ ಗಾಸಿಪ್‌ಗಳು ಕೇಳಿಬರುತ್ತಲೇ ಇವೆ. ಅಲ್ಲದೆ ಅನೇಕ ಅಭಿಮಾನಿಗಳು ಅವರಿಬ್ಬರೂ ಮದುವೆಯಾಗಲಿ ಎಂದೇ ಆಶಿಸುತ್ತಿದ್ದಾರೆ.

ಅಭಿಮಾನಿಗಳ ಆಸೆಯಂತೆ ಪ್ರಭಾಸ್‌ – ಅನುಷ್ಕಾ ಅಭಿಮಾನಿಗಳಿಗೆ ಮುಂದಿನ ವರ್ಷ ಸರ್ಪೈಸ್‌ ಸಿಗುವುದಂತು ಸತ್ಯ ಎಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಸೆನ್ಸಾರ್‌ ಬೋರ್ಡ್‌ನ ಉಮೈರ್ ಸಂದು ಟ್ವೀಟ್ ಮಾಡಿದ್ದಾರೆ. ಸದ್ಯ ಅವರು ಮಾಡಿರುವ ಟ್ವೀಟ್‌ ಎಲ್ಲರಲ್ಲೂ ಕುತೂಹಲ ಕೆರಳಿಸಿರುವುದಂತೂ ಸತ್ಯ.

ನಂಬಿ ಅಥವಾ ಬಿಡಿ. ಆದರೆ ಇದು ಶೇ.100ರಷ್ಟು ಸತ್ಯ. ಬಾಹುಬಲಿಯ ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದು, ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ. ಮುದಿನ ವರ್ಷ ಅವರಿಬ್ಬರ ಅಭಿಮಾನಿಗಳಿಗೂ ಸರ್ಪೈಸ್‌ ಸಿಗಲಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಟ್ವೀಟನ್ನು ಡಿಲೀಟ್‌ ಮಾಡಿದ್ದಾರೆ. ಇದು ನಿಜಾನಾ ಎಂಬುದು ಖಚಿತವಾಗಿಲ್ಲ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com