ನಿಮ್ಮ ಫೋನ್ ನಲ್ಲೂ ಇದೆ 1.2ಬಿಲಿಯನ್ ಡೌನ್ಲೋಡ್ ಆದ ಆಪ್..!! ಆಪ್ ಯಾವುದು..??

ಸ್ಮಾರ್ಟ್‌ಫೋನ್ ಇತಿಹಾಸದಲ್ಲಿಯೇ ಅತೀ ಸುಲಭವಾಗಿ ಡೇಟಾವನ್ನು ಒಂದು ಫೋನ್ ನಿಂದ ಮತ್ತೊಂದು ಫೋನ್‌ಗೆ ವರ್ಗಾಹಿಸಿದ ಕೀರ್ತಿ “Share it” ಆಪ್‌ಗೆ ಸಲ್ಲುತ್ತದೆ. ಸದ್ಯ ಈ ಆಪ್ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದ್ದು, ವಿಶ್ವದಲ್ಲಿ ಸುಮಾರು 1.2 ಬಿಲಿಯನ್ ಮಂದಿ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಕೇವಲ ಎರಡು ವರ್ಷದಲ್ಲಿ ಶೇರ್‌ ಇಟ್ ಈ ದಾಖಲೆಯ ಮಟ್ಟದ ಬೆಳವಣಿಗೆಯನ್ನು ಸಾಧಿಸಿದ್ದು, ಬಳಕೆದಾರರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಈ ಆಪ್ ಅನ್ನು ಆಂಡ್ರಾಯ್ಡ್ ಮತ್ತು iOS ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದರುವುದು ಸಹ ಮಟ್ಟದ ಬೆಳವಣಿಗೆಗೆ ಕಾರಣವಾಗಿದೆ.

ವಿಶ್ವದಲ್ಲಿ 1.2 ಬಿಲಿಯನ್, ಭಾತರದಲ್ಲಿಯೇ 300 ಮಿಲಿಯನ್
ಈಗಾಗಲೇ ವಿಶ್ವದಲ್ಲಿ 1.2 ಬಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ ಎನ್ನಲಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಈ ಆಪ್ ಬಳಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದ್ದು, ಸುಮಾರು 300 ಮಿಲಿಯನ್ ಬಾರಿ ಡೌನ್‌ಲೋಡ್ ಆಗಿದೆ ಎನ್ನಲಾಗಿದೆ. ವಿಶ್ವದ ಎಲ್ಲೇ ಕಡೆಯೂ ಖ್ಯಾತಿಯನ್ನು ಪಡೆದುಕೊಂಡಿದೆ.

ಎರಡು ಮೊಬೈಲ್‌ಗಳ ನಡುವೆ ವಿಡಿಯೋ ಮತ್ತು ಮ್ಯೂಸಿಕ್ ಸೇರಿದಂತೆ ಆಪ್‌ಗಳು ಡೇಟಾಗಳನ್ನು ಹಂಚಿಕೊಳ್ಳಲು ಶೇರ್‌ ಇಟ್ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ ಇದು ಹೆಚ್ಚಿನ ಖ್ಯಾತಿಯನ್ನು ತಂದು ಕೊಟ್ಟಿದೆ. ಈ ಕಾರಣದಿಂದಲೇ ಈ ಆಪ್ ಅನ್ನು ಬಳಕೆ ಮಾಡಿಕೊಳ್ಳಲುವಂತೆ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಪ್ರೇರೆಪಿಸುತ್ತಿದೆ.


ಇನ್ನು ಬೆಳೆಯಲಿದೆ ಸಂಖ್ಯೆ
ಶೇರ್ ಇಟ್ ಆಪ್ ಖ್ಯಾತಿಯೂ ಇನ್ನು ಹೆಚ್ಚಾಗುತ್ತಿದೆ. ಅಲ್ಲದೇ ಮಾರುಕಟ್ಟೆಗೆ ಬರುವ ಸ್ಮಾರ್ಟ್‌ಫೋನ್‌ಗಳೇಲ್ಲವು ಶೇರ್‌ ಇಟ್ ಆಪ್‌ ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗುವಂತ ಸ್ಥಿತಿಯೂ ನಿರ್ಮಾಣವಾಗಿದ್ದು, ಈ ಆಪ್‌ಗೆ ಪ್ರತಿ ಸ್ಪರ್ಧಿಯೇ ಇಲ್ಲ ಎನ್ನಲಾಗಿದೆ.

Leave a Reply

Your email address will not be published.