Cricket : ಸಾಧಾರಣ ಮೊತ್ತಕ್ಕೆ ಲಂಕಾ ಆಲೌಟ್ : ಮಿಂಚಿದ ಅಶ್ವಿನ್, ಜಡೇಜಾ

ನಾಗ್ಪುರದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡು 205 ಕ್ಕೆ ಆಲೌಟ್ ಆಯಿತು. ಲಂಕಾ ಪರವಾಗಿ ಅರ್ಧಶತಕ ಬಾರಿಸಿದ ದಿನೇಶ್ ಚಂಡಿಮಲ್ (57) ದಿಮುತ್ ಕರುಣರತ್ನೆ (53) ರನ್ ಗಳಿಸಿದರು. ಭಾರತದ ಪರವಾಗಿ ಸ್ಪಿನ್ನರುಗಳಾದ ರವಿಚಂದ್ರನ್ ಅಶ್ವಿನ್ 4, ರವೀಂದ್ರ ಜಡೇಜಾ 3 ಮತ್ತು ಇಶಾಂತ್ ಶರ್ಮಾ 3 ವಿಕೆಟ್ ಪಡೆದರು.

ಪ್ರಥಮ ಇನ್ನಿಂಗ್ಸ್ ಆರಂಭಿಸಿರುವ ಭಾರತ, ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದೆ. ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸಮನ್ ಕೆ ಎಲ್ ರಾಹುಲ್ 7 ರನ್ ಗಳಿಸಿ ಲಾಹಿರು ಗಮಗೆ ಎಸೆತದಲ್ಲಿ ಬೋಲ್ಡ್ ಆಗಿ ಹೊರನಡೆದರು. ದಿನದಾಟದ ಅಂತ್ಯಕ್ಕೆ ಮುರಳಿ ವಿಜಯ್ (2*) ಹಾಗೂ ಚೇತೇಶ್ವರ ಪೂಜಾರಾ (2*) ಅಜೇಯರಾಗುಳಿದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com