ಮೋದಿ ಮೇಲೆ ಚಪ್ಪಲಿ ಎಸೆದವರಿಗೆ 1 ಲಕ್ಷ ಬಹುಮಾನ ನೀಡ್ತೀನಿ ಎಂದ ನಿರ್ಮಾಪಕ……!!!!

ದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಚಪ್ಪಲಿ ಎಸೆದರೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ಮುಂಬೈನ ನಿರ್ಮಾಪಕ ರಾಮ್‌ ಸುಬ್ರಹ್ಮಣ್ಯನ್ ಘೋಷಿಸಿದ್ದಾರೆ.

ಕೆಲ ದಿನಗಳ ಹಿಂದೆ ಪದ್ಮಾವತಿ ಸಿನಿಮಾ ಬಿಡುಗಡೆ ವಿಚಾರ ಕುರಿತಂತೆ ಬಿಜೆಪಿ ಸಂಸದರೊಬ್ಬರು ದೀಪಿಕಾ ಪಡುಕೋಣೆ ತಲೆ ಕಡಿದರೆ 10 ಕೋಟಿ ನೀಡುವುದಾಗಿ ಘೋಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಪದ್ಮಾವತಿ ಸಿನಿಮಾ ಕುರಿತ ವಿವಾದದಿಂದ ಸಿಟ್ಟಿಗೆದ್ದಿರುವ ರಾಮ್‌ ಸುಬ್ರಹ್ಮಣ್ಯನ್ ಪ್ರಧಾನಿ ಮೋದಿ ಮೇಲೆ ಚಪ್ಪಲಿ ಎಸೆದವರಿಗೆ 1 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಜೊತೆಗೆ ಇಂತಹದ್ದೊಂದು ಸಂಸ್ಕೃತಿ ಶುರುವಾಗಿದೆ. ಇದನ್ನು ಆರಂಭಿಸಿರುವುದೂ ಬಿಜೆಪಿಯೇ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com