ಡಿಸೆಂಬರ್‌ 15 ರಿಂದ ಜನವರಿ 5ರವರೆಗೆ ನಡೆಯಲಿದೆ ಚಳಿಗಾಲದ ಸಂಸತ್‌ ಅಧಿವೇಶನ

ದೆಹಲಿ : ಡಿಸೆಂಬರ್‌ 15ರಿಂದ ಜನವರಿ 5ರವರೆಗೆ ಸಂಸತ್ತಿನ ಚಳಿಗಾಲಯ ಅಧಿವೇಶನ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಂಸದೀಯ ವ್ಯವಹಾರಗಳ ಸಮಿತಿ ಸಭೆ ನಡೆಸಿದ್ದು, ಸಭೆ ಬಳಿಕ ಚಳಿಗಾಲಯ ಅಧಿವೇಶನದ ದಿನಾಂಕವನ್ನು ನಿರ್ಧರಿಸಿದೆ.
ಒಟ್ಟು 14 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಡಿ.25 ಹಾಗೂ 26ಕ್ಕೆ ಕ್ರಿಸ್‌ಮಸ್‌ ರಜೆ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.
ಇತ್ತೀಚೆಗಷ್ಟೇ ಗುಜರಾತ್‌ ವಿಧಾನಸಭಾ ಚುನಾವಣೆಗೂ ಮುನ್ನ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳನ್ನು ಎದುರಿಸಲು ಸಾಧ್ಯವಾಗದೆ ಎನ್‌ಡಿಎ ಸರ್ಕಾರ ಅಧಿವೇಶನವನ್ನು ಮುಂದೂಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಸಂಸತ್ತಿನ ಚಳಿಗಾಲಯ ಅಧಿವೇಶನ ಸುಲಲಿತವಾಗಿ ನಡೆಸಲು ವಿರೋಧ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದು ಸಂಸದೀಯ ವ್ಯವಹಾರಗಳ  ಖಾತೆ ಸಚಿವ ಅನಂತ್‌ ಕುಮಾರ್‌ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com