ಕೇಂದ್ರ ಸರ್ಕಾರದಿಂದ ಹಾರ್ದಿಕ್‌ ಪಟೇಲ್‌ಗೆ “ವೈ” ಶ್ರೇಣಿಯ ಭದ್ರತೆ…

ದೆಹಲಿ : ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿರುವ ಪಟೇಲ್‌ ಸಮುದಾಯದ ಹೋರಾಟಗಾರ ಹಾರ್ದಿಕ್‌ ಪಟೇಲ್‌ಗೆ ಕೇಂದ್ರ ಸರ್ಕಾರ ವೈ ಶ್ರೇಣಿಯ ಭದ್ರತೆಯನ್ನು ನೀಡಿದ್ದು, ಭದ್ರತೆಯ ಹೊಣೆಯನ್ನು ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ (ಸಿಐಎಸ್‌ಎಫ್‌)ಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಹಾರ್ದಿಕ್‌ಗೆ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆ ನೀದುತ್ತಿರುವುದಾಗಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ ವಿಶೇಷ ಭದ್ರತಾ ವಿಭಾಗವನ್ನು ಹೊಂದಿದ್ದು, ರಾಷಟ್ರೀಯ ಭದ್ರತಾ ಸಲಹೆಗರ ಅಜಿತ್‌ ದೋವಲ್‌ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಸೇರಿದಂತೆ 60 ಮಂದಿ ವಿಐಪಿಗಳಿಗೆ ಭದ್ರತೆ ಒದಗಿಸುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com