ಕಾರಿನಿಂದ ಇಳಿದು ಪ್ರಾಣ ಕಳೆದುಕೊಂಡ ವ್ಯಕ್ತಿ….ಅಷ್ಟಕ್ಕೂ ಆಗಿದ್ದಾದರೂ ಏನು…?

ಕೋಲ್ಕತ್ತಾ : ಎದುರಿಗೆ ಬರುತ್ತಿದ್ದ ಆನೆಯ ಫೋಟೊ ತೆಗೆಯಲು ಹೋಗಿ ಆನೆಯ ಕಾಲ್ತುಳಿತಕ್ಕೆ ಸಿಕ್ಕು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಜಾಲ್ವೈಗುರಿಯ ಬಳಿಯಿರುವ ಲಟಗುರಿ ಪ್ರದೇಶದಲ್ಲಿ ಆನೆಯೊಂದು ಹಾದುಹೋಗುತ್ತಿತ್ತು. ಈ ವೇಳೆ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಕಾರಿನಿಂದ ಕೆಳಗಿಳಿದು ಆನೆಯ ಫೋಟೊ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಆನೆ ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಕಾಲಿನಿಂದ ತುಳಿದು ಕೊಂದಿದೆ.

ಮೃತ ವ್ಯಕ್ತಿಯನ್ನು ಸಾದಿಕ್ ರೆಹಮಾನ್‌ ಎಂದು ಗುರುತಿಸಲಾಗಿದ್ದು, ಆತ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಕಾಡಾನೆಗಳು ಓಡಾಡುತ್ತಿರುತ್ತವೆ. ಆದರೆ ಇಂತಹ ಸಂದರ್ಭದಲ್ಲಿ ಯಾರೂ ವಾಹನದಿಂದ ಕೆಳಗಿಳಿಯುವುದಿಲ್ಲ. ಆದರೆ ಸಾದಿಕ್‌ ವಾಹನದಿಂದ ಕೆಳಗಿಳಿದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com