BIGG BOSS ಮನೆಯಿಂದ ನಾನು ಆದಷ್ಟು ಬೇಗ ಹೊರಹೋಗಬೇಕು ಎಂದ ನಟಿ…….ಯಾಕೆ…?

ಅಕ್ಕ ಧಾರಾವಾಹಿಯ ಖ್ಯಾತ ನಟಿ ಅನುಪಾ ಗೌಡ ಬಿಗ್‌ಬಾಸ್‌ ಮನೆಯಲ್ಲಿ ಬಳಹ ಆ್ಯಕ್ಟಿವ್‌ ಸ್ಪರ್ಧಿಯಾಗಿದ್ದಾರೆ. ಆದರೆ ಈಗ ಅನುಪಮಾಗೆ ಬಿಗ್‌ಬಾಸ್‌ ಮನೆ ಸಾಕಾಗಿ ಹೋಗಿದೆಯಂತೆ. ಆದ್ದರಿಂದ ನಾನು ಮನೆಗೆ ಹೋಗಬೇಕು ಎಂದು ಅನುಪಮಾ ಹೇಳುತ್ತಿದ್ದಾರೆ.
ಹಾಲು, ಚಾಕಲೇಟ್‌ ವಿಚಾರವಾಗಿ ಇತರೆ ಸ್ಪರ್ಧಿಗಳ ಮುನಿಸಿಗೆ ಕಾರಣವಾಗಿದ್ದ ಅನುಪಮಾಗೆ ಈಗ ಬಿಸ್ಕೇಟ್ ವಿಚಾರವಾಗಿ ಬಿಗ್‌ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಿದೆಯಂತೆ.
ಮನೆಯಲ್ಲಿ ಬಿಸ್ಕೇಟ್‌ಗಳನ್ನೂ ಲೆಕ್ಕ ಮಾಡಿ ತಿನ್ನುವ ಪರಿಸ್ಥಿತಿ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಲ್ಲಿ ಜನರ ಮೆಂಟಾಲಿಟಿ ನನಗೆ ಇಷ್ಟವಾಗುತ್ತಿಲ್ಲ. ಹಾಲಿಗಾಗಿ ಕಿತ್ತಾಡೋದು, ಬಿಸ್ಕೆಟ್‌ಗಳನ್ನು ಎಣಿಸಿ ತಿನ್ನುವುದು ನನಗೆ ಇಷ್ಟವಾಗುತ್ತಿಲ್ಲ. ಇದನ್ನು ನೋಡಿದವರಿಗೆ ಏನನಿಸುವುದಿಲ್ಲ ಎಂದು ಶ್ರುತಿ ಪ್ರಕಾಶ್‌ ಬಳಿ  ಹೇಳಿದ್ದಾರೆ.
ಅಲ್ಲದೆ ಅನುಪಮಾ ಸಿಹಿ ಕಹಿ ಚಂದ್ರು ಅವರ ಜೊತೆ ಆತ್ಮೀಯವಾಗಿರುವ ವಿಚಾರ ಕುರಿತಂತೆ ಮನೆಯಲ್ಲಿ ಕೆಲವರು ಮಾತನಾಡುತ್ತಿದ್ದಾರಂತೆ. ಆದ್ದರಿಂದ ಧೈರ್ಯ ಇದ್ದರೆ ಎದುರು ನಿಂತಪ ಮಾತನಾಡಲಿ. ಇಂತಹ ಚೀಪ್‌ ಮೆಂಟಾಲಿಟಿ ನನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com