2019ರೊಳಗೆ ರಾಮಮಂದಿರ ನಿರ್ಮಾಣವಾಗುತ್ತೆ, ಜೈಕಾರ ಹಾಕಲು ಸಿದ್ದರಾಗಿ : ಮೋಹನ್ ಭಾಗವತ್‌

ಉಡುಪಿ : ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ಕಳೆದಿದೆ. ಇನ್ನು ನಾವು ಕಾಯುವುದರಲ್ಲಿ ಅರ್ಥವಿಲ್ಲ. ಇನ್ನೊಂದು ವರ್ಷದೊಳಗೆ ರಾಮಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಆರ್‌ಎಸ್ಎಸ್‌ ಕಾರ್ಯಕರ್ತರೆಲ್ಲರೂ ಬಹಳ ಆಸೆಯಿಂದ ರಮಮಂದಿರ ಕಟ್ಟುವುದು ಯಾವಾಗ ಎಂದು ಕೇಳುತ್ತಾರೆ. ಅಲರ ಪ್ರಶ್ನೆಗಳಿಗೆ ಉತ್ತರಿಸುವುದೇ ಕಷ್ಟವಾಗಿದೆ ಎಂದಿದ್ದಾರೆ.

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್‌ನಲ್ಲಿ ಮಾತನಾಡಿದ ಭಾಗವತ್‌, ರಾಮಮಂದಿರ ಕಟ್ಟುವುದೇ ನಮ್ಮ ಗುರಿ. ಉಡುಪಿಯಲ್ಲಿ ಹಿಂದೂ ದೇಶ ಹೇಗಿರಬೇಕೆಂಬುದರ ಕುರಿತು ದರ್ಶನವಾಗಿದೆ. ನಮ್ಮ ಹೋರಾಟ ವಿಜಯದತ್ತ ಸಾಗಬೇಕಿದೆ. ಸಾಮಾಜಿಕ ಸಾಮರಸ್ಯ ಎಂಬುದು ಎಲ್ಲಾ ಸಮುದಾಯದವರಿಗೂ ಸೀಮಿತವಾಗಬೇಕು. ಅದು ಕೇವಲ ನಮಗೆ ಮಾತ್ರ ಅನ್ವಯವಾಗುವಂತಿರಬಾರದು ಎಂದಿದ್ದಾರೆ.

ಅಲ್ಲದೆ ಅಯೋಧ್ಯೆಯಲ್ಲಿ ರಾಮಮಂದಿರ ಮಾತ್ರ ನಿರ್ಮಾಣವಾಗಬೇಕು. ಅದೇ ಕಲ್ಲುಗಳಿಂದಲೇ ರಾಮಮಂದಿರ ನಿರ್ಮಾಣ ಮಾಡುತ್ತೇವೆ. ಹಿಂದೂ ದೇಶ ಬಾರತ ವಿಶ್ವಗುರುವಾಗುವತ್ತ ಸಾಗುತ್ತಿದೆ. ರಾಮಮಂದಿರ ನಿರ್ಮಾಣವಾದ ಮೇಲೆ ಜೈಕಾರ ಹಾಕಲು ಎಲ್ಲಾ ಹಿಂದುಗಳೂ ಸಿದ್ಧರಾಗಿರಿ ಎಂದಿದ್ದಾರೆ.

 

 

 

 

Leave a Reply

Your email address will not be published.

Social Media Auto Publish Powered By : XYZScripts.com