Shocking : ಉತ್ತರ ಕೊರಿಯಾ ಮಹಿಳಾ ಸೈನಿಕರು ಇಂತಹ ಕೆಲಸವನ್ನು ಮಾಡಲೇಬೇಕಂತೆ..!

ಪ್ಯಾಂಗ್‌ಯಾಂಗ್‌ : ಉತ್ತರ ಕೊರಿಯಾ ಪದೇ ಪದೇ ಅಣ್ವಸ್ತ್ರಗಳ ಪ್ರಯೋಗ ಮಾಡಿ ವಿಶ್ವದ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಯುದ್ಧೋತ್ಸಾಹ ತೋರುತ್ತಿರುವ ಉತ್ತರ ಕೊರಿಯಾದಲ್ಲಿ ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ.

ಹೌದು ಉತ್ತರ ಕೊರಿಯಾದಲ್ಲಿ ಮಹಿಳೆಯರು ದೇಶದ ಮೇಲಿನ ಅಪಾರವಾದ ಪ್ರೀತಿಯಿಂದ ಸೈನ್ಯ ಸೇರಿದರೆ ಅಲ್ಲಿ ಪಡಬಾರದ ಪಾಡು ಪಡುತ್ತಿದ್ದಾರೆ. ಸೌನ್ಯಕ್ಕೆ ಸೇರಿದ ಮಹಿಳೆಯರು ಮೇಲಧಿಕಾರಿಗಳಿಂದ ಆಗಾಗ್ಗೆ ಅತ್ಯಾಚಾರಕ್ಕೊಳಗಾಗುತ್ತಾರಂತೆ. ಇದೆಲ್ಲ ಅಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಅನುಭವಿಸುತ್ತಿರುವ ಮಹಿಳೆಯರ ಪಾಡು ಹೇಳತೀರದಾಗಿದೆ ಎಂದು ಇತ್ತೀಚೆಗಷ್ಟೇ ಸೈನ್ಯದಿಂದ ತಪ್ಪಿಸಿಕೊಂಡು ಬಂದ ಲೀ ಸೋ ಯೊನ್‌ ಹೇಳಿದ್ದಾರೆ.

ಒಮ್ಮೆ ಮಹಿಳೆ ಸೈನ್ಯಕ್ಕೆ ಸೇರಿದಳೆಂದರೆ ಮುಗಿಯಿತು, ಕಠಿಣ ಶ್ರಮದ ಜೊತೆಗೆ ಮೇಲಧಿಕಾರಿಗಳ ಲೈಂಗಿಕ ದಾಸಿಯಾಗಿಯೂ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ಸೈನ್ಯದ ಕರ್ತವ್ಯದಲ್ಲಿ ಅನುಭವಿಸುವ ಕಠಿಣ ಪರಿಸ್ಥಿತಿಗಳಿಂದ ಮುಟ್ಟಾಗುವುದು ಇಲ್ಲ.

ಸೇನೆಯ ಕಮಾಂಡರ್‌ ತನಗಿಷ್ಟ ಬಂದ ಮಹಿಳಾ ಸೇನಾನಿಯನ್ನು ಆರಿಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗುತ್ತಾನೆ. ಅಲ್ಲದೆ ಸೈನ್ಯದಲ್ಲಿ  ನೀಡುವ ಆಹಾರದಲ್ಲಿ ಪೌಷ್ಠಿಕತೆ ಇರುವುದಿಲ್ಲ. ಆದ್ದರಿಂದ ನಾವು ಮುಟ್ಟಾಗುವುದೇ ಇಲ್ಲ. ಆದರೆ ಮುಟ್ಟಾಗದ ಸಂಕಟ ಏನೆಂದು ಅನುಭವಿಸಿದವರಿಗೇ ಗೊತ್ತು  ಎಂದಿದ್ದಾರೆ.

ಸೈನ್ಯದಲ್ಲಿ ಸರಿಯಾಗಿ ಸ್ನಾನ ಮಾಡಲು ಸಾಧ್ಯವಾಗುವುದಿಲ್ಲ. ಕೊಳವೆ ನೀರಿನಲ್ಲಿ ನಾವು ಸ್ನಾನ ಮಾಡಬೇಕು. ಆ ನೀರಿನಲ್ಲಿ ಕಪ್ಪೆ, ಹಾವು ಇಂತಹ ಸಾಕಷ್ಟು ಕ್ರಿಮಿ ಕೀಟಗಳಿರುತ್ತವೆ. ಅದರಲ್ಲಿ ಸ್ನಾನ ಮಾಡುವುದೇ ದೊಡ್ಡ ಹಿಂಸೆ ಎಂದಿದ್ದಾರೆ.

ಈ ಹಿಂದೆ ಲೀ ಒಮ್ಮೆ ಸೈನ್ಯದಿಂದ ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ ಎರಡನೇ ಬಾರಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸೈನ್ಯದಲ್ಲಿ ಮಹಿಳೆಯರ ದಯನೀಯ ಸ್ಥಿತಿಯನ್ನು ವಿಶ್ವದ ರಾಷ್ಟ್ರಗಳ ಮುಂದೆ ಬಿಚ್ಚಿಟ್ಟಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com