ಮಾಲೀಕ ಸಾಕಿದ್ದ ಪಾರಿವಾಳವನ್ನು ಬಚಾವ್‌ ಮಾಡಲು ಹೋಗಿ ಪ್ರಾಣಬಿಟ್ಟ ಕೋತಿ

ಕೋಲ್ಕತ್ತಾ : ತನ್ನ ಮಾಲೀಕ ಸಾಕಿದ ಪಾರಿವಾಳವನ್ನು ರಕ್ಷಿಸುವ ಸಲುವಾಗಿ ಕೋತಿಯೊಂದು ಪ್ರಾಣಬಿಟ್ಟ ಘಟನೆ ಕೋಲ್ಕತ್ತಾದಲ್ಲಿ ನಡೆದದೆ.

ಕೋಲ್ಕತ್ತಾ ಮೂಲದ ವಿಕ್ಕಿ ಯಾದವ್‌ ಎಂಬುವವರು ಪಾರಿವಾಳ ಹಾಗೂ ಕೋತಿಯನ್ನು ಸಾಕಿದ್ದರು. ಪಾರಿವಾಳಗಳನ್ನು ಟೆರೆಸ್ ಮೇಲೆ ಗೂಡಿನಲ್ಲಿರಿಸಲಾಗಿತ್ತು. ಈ ವೇಳೆ ಪಾರಿವಾಳಗಳನ್ನು ಕದಿಯಲು ಕಳ್ಳರು ಬಂದಿದ್ದಾರೆ. ಇದನ್ನು ನೋಡಿದ ಕೋತಿ ಕಳ್ಳರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ಕೋತಿಯ ಎರಡೂ ಕಾಲುಗಳನ್ನು ಚಾಕುವಿನಿಂದ ಕತ್ತರಿಸಿ ಪರಾರಿಯಾಗಿದ್ದಾರೆ.

ವಿಕ್ಕಿ ಯಾದವ್‌ ಟೆರೆಸ್‌ ಮೇಲೆ ಹೋಗುವುದು ತಡವಾಗಿದೆ. ಕೋತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ ಕೂಡಲೆ ಕೋತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಕೋತಿ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಘಟನೆಗೆ ಪ್ರಾಣಿ ದಯಾಸಂಘ ಹಾಗೂ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದು, ದೂರು ದಾಖಲಿಸಲಾಗಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com