ಕೊಹ್ಲಿ ಸಚಿನ್ ರೆಕಾರ್ಡ್ ಮುರಿಯಬಹುದಾ..! : ಭವಿಷ್ಯ ನುಡಿದ ಅಖ್ತರ್ ಹೇಳಿದ್ದೇನು..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದಿನ ಕರಿಯರ್ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಭವಿಷ್ಯ ನುಡಿದಿದ್ದಾರೆ. ಕೊಹ್ಲಿ ಭವಿಷ್ಯದ ಬಗ್ಗೆ ಮಾತನಾಡಿರುವ ಅಖ್ತರ್ ‘ ಆಧುನಿಕ ಕ್ರಿಕೆಟ್ ನ ಶ್ರೇಷ್ಟ ಆಟಗಾರರಲ್ಲಿ ಒಬ್ಬ. ಚೇಸ್ ಮಾಡುವಾಗ ಇನ್ನಿಂಗ್ಸ್ ಕಟ್ಟುವಾಗ ಕೊಹ್ಲಿಯಲ್ಲಿ ಇರುವಷ್ಟು ತಿಳುವಳಿಕೆ ಬೇರೆ ಯಾರಲ್ಲಿಯೂ ನಾನು ನೋಡಿಲ್ಲ. ವಿರಾಟ್ ಈಗಾಗಲೇ 50 ಶತಕ ಬಾರಿಸಿದ್ದಾರೆ. ಸಚಿನ್ ರೆಕಾರ್ಡ್ ಮುರಿಯುವ ಸಾಮರ್ಥ್ಯವಿರುವ ಏಕೈಕ ಆಟಗಾರ ಕೊಹ್ಲಿ. ಅವರ ಮೇಲೆ ಯಾವುದೇ ಒತ್ತಡ ಇಲ್ಲ. ಆರಾಮಾಗಿ ಎಂಜಾಯ್ ಮಾಡಿಕೊಂಡು ಆಡಬಹುದು ‘ ಎಂದಿದ್ದಾರೆ.

Image result for kohli shoaib akhtar sachin

ಮಿಸ್ಬಾಹ್ ಉಲ್ ಹಕ್ 43 ವಯಸ್ಸಿನವರೆಗೆ ಆಡುವುದು ಸಾಧ್ಯವಿದೆ ಎಂದ ಮೇಲೆ, ಕೊಹ್ಲಿ 44 ವರ್ಷದವರೆಗೆ ಆಡಬಹುದು. ಅಲ್ಲಿಯವರೆಗೂ ಆಡಿದರೆ, ಹೀಗೆಯೇ ಸ್ಕೋರ್ ಮಾಡುತ್ತ ಸಾಗಿದರೆ ಸಚಿನ್ ರೆಕಾರ್ಡ್ ಮುರಿಯಬಲ್ಲರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಕೊಹ್ಲಿ 120 ಸೆಂಚುರಿ ಬಾರಿಸಬಹುದು. ಕೊಹ್ಲಿಯನ್ನು ಸಚಿನ್ ರೊಂದಿಗೆ ಹೋಲಿಸುವುದು ಸರಿಯಲ್ಲ. ಸಚಿನ್ ಸಾರ್ವಕಾಲಿಕ ಶ್ರೇಷ್ಟ ಆಟಗಾರ. ವಿರಾಟ್ ಈಗಿನ ಕಾಲದ ಶ್ರೇಷ್ಟ ಆಟಗಾರಾಗಿದ್ದಾರೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.