ಕರ್ನಾಟಕದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ “ನೋ ಬ್ಯಾಗ್‌ ಡೇ” ಭಾಗ್ಯ…….

ಬೆಂಗಳೂರು : ರಾಜ್ಯದ ವಿದ್ಯಾರ್ಥಿಗಳಿಗೊಂದ ಸಿಹಿ ಸುದ್ದಿ. ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ವರ್ಷದಿಂದ ನೋ ಬ್ಯಾಗ್‌ ಡೇ ಮಾಡಲು ನಿರ್ಧರಿಸಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲೂ ವಾರಕ್ಕೊಮ್ಮೆ ನೋ ಬ್ಯಾಗ್‌ ಡೇ ಮಾಡಲು ಯೋಜನೆ ಸಿದ್ಧಪಡಿಸಿದೆ.
ಸಿಬಿಎಸ್‌ಸಿ ಹಾಗೂ ಐಸಿಎಸ್‌ಇ ಶಾಲೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಮಕ್ಕಳು ಪ್ರತಿನಿತ್ಯ ಸಾಕಷ್ಟು ಪುಸ್ತಕಗಳನ್ನ ಹೊತ್ತು ದಣಿದಿರುತ್ತಾರೆ. ಮಕ್ಕಳ ವಿದ್ಯಾರ್ಥಿ ಜೀವನ ನೆನಪಿಸಿಕೊಳ್ಳುವಂತಿರಬೇಕು ಅದಕ್ಕಾಗಿ ಈ ಯೋಜನೆ ಜಾರಿ ಮಾಡುತ್ತಿರುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.
ರಾಜ್ಯದ ಎಲ್ಲಾ ಶಾಲೆಗಳಲ್ಲೂ ಒಂದೇ ದಿನ ನೋ ಬ್ಯಾಗ್‌ ಡೇ ಆಚರಿಸಬೇಕು. ಬೆಳಗಾವಿ ಅಧಿವೇಶನದ ಬಳಿಕ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವುದಾಗಿ ಹೇಳಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com