ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಕಾರ್ಖಾನೆಯಲ್ಲಿ ಎದೆಗೆ ಚುಚ್ಚಿದ ರಾಡು : ವ್ಯಕ್ತಿ ಸಾವು
ಹೈದರಾಬಾದ್ : ಪ್ಲಾಸ್ಟಿಕ್ ಬಾಟಲಿ ತಯಾರಿಕಾ ಫ್ಯಾಕ್ಟರಿಯಲ್ಲಿ ವ್ಯಕ್ತಿಯ ಎದೆಗೆ ಕಬ್ಬಿಣದ ರಾಡು ಚುಚ್ಚಿ ಸಾವಿಗೀಡಾದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಯಲ್ಲಪ್ಪ (22) ಎಂದು ಗುರುತಿಸಲಾಗಿದೆ.
ಆಂಧ್ರ ಪ್ರದೇಶದ ಕರ್ನೂಲ್ನಲ್ಲಿರುವ ಪ್ಲಾಸ್ಟಿಕ್ ತಯಾರಿಕಾ ಘಟಕದಲ್ಲಿ ಯಲ್ಲಪ್ಪ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾರ್ಕ್ ಮಷೀನ್ ಕೆಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡುವ ವೇಳೆ ಯಂತ್ರವನ್ನು ಬೇರೆಡೆಗೆ ತರುಗಿಸಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಯಂತ್ರ ತಿರುಗಿ ಗೋಡೆ ಹಾಗೂ ರಾಡಿನ ಮಧ್ಯೆ ಯಲ್ಲಪ್ಪ ಸಿಕ್ಕಿಕೊಂಡಿದ್ದರು.
ಯಂತ್ರದೊಳಗಿದ್ದ ಕಬ್ಬಿಣದ ರಾಡು ಯಲ್ಲಪ್ಪ ಎದೆಗೆ ಚುಚ್ಚಿ ತೀವ್ರ ರಕ್ತ ಸ್ರಾವವಾಗಿದು, ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸದ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಯಲ್ಲಪ್ಪ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.